Friday, May 17, 2024
Homeತಾಜಾ ಸುದ್ದಿಮನೆಗೆ ಕ್ಯಾಪ್ಸಿಕಂ ತಂದಿದ್ದ ದಂಪತಿಗೆ ಕಾದಿತ್ತು ಭರ್ಜರಿ ಶಾಕ್.. ಅದರಳೊಗಿತ್ತು ಯಾರೂ ಊಹಿಸದ ಜೀವಿ..

ಮನೆಗೆ ಕ್ಯಾಪ್ಸಿಕಂ ತಂದಿದ್ದ ದಂಪತಿಗೆ ಕಾದಿತ್ತು ಭರ್ಜರಿ ಶಾಕ್.. ಅದರಳೊಗಿತ್ತು ಯಾರೂ ಊಹಿಸದ ಜೀವಿ..

spot_img
- Advertisement -
- Advertisement -

ಕೆನಡಾ :  ನಾವೆಲ್ಲಾ ಪ್ರಾಣಿಗಳನ್ನು, ಪಕ್ಷಿಗಳನ್ನು ಇಲ್ಲಾ ಮನುಷ್ಯರನ್ನೇ ಹೋಲುವಂತಹ ಹಣ್ಣು, ತರಕಾರಿಗಳನ್ನು ನೋಡಿರುತ್ತೇವೆ. ಆದರೆ ಕೆನಡಾದಲ್ಲಿ ಮಾರುಕಟ್ಟೆಯಿಂದ ತರಕಾರಿ ತಂದ ದಂಪತಿಗೆ ಯಾರೂ ಊಹಿಸದ ಅನುಭವವಾಗಿದೆ, ಕೆನಡಾದ ಕ್ವಿಬೆಕ್ನ ಸಗುಯೆನೆ ಎಂಬಲ್ಲಿ  ನಿಕೋಲಾ ಗ್ಯಾಗ್ನೊನ್ ಮತ್ತು ಜಿ ರಾರ್ಡ್ ಬ್ಲಾಕ್ ಬರ್ನ್ ಎಂಬ ದಂಪತಿ ಕಳೆದ ಫೆಬ್ರವರಿ 9 ರಂದು ನಿಕೋಲಾ ಹತ್ತಿರದ ಮಾರುಕಟ್ಟೆಯಿಂದ ನಿತ್ಯ ಬಳಕೆಯ ತರಕಾರಿಗಳ ಜೊತೆಗೆ ಕ್ಯಾಪ್ಸಿಕಂ ಕೂಡಾ ಮನೆಗೆ ತಂದಿದ್ದಾರೆ. ಅನಂತರ ಪತಿಯೊಡನೆ ಸೇರಿ ಅವರು ಅಡುಗೆ ಕೆಲಸ ಮಾಡುವಾಗ ಕ್ಯಾಪ್ಸಿಕಂ ಕತ್ತರಿಸಿದ್ದಾರೆ. ಕತ್ತರಿಸಿದ  ಕೂಡಲೇ ಅದರೊಳಗೆ ಒಂದು ಜೀವಂತ ಕಪ್ಪೆ ಅವರ ಕಣ್ಣಿಗೆ ಬಿದ್ದು ಒಂದು ಕ್ಷಣ ಆಕೆ ಭಯಪಟ್ಟಿದ್ದಾರೆ. ಅನಂತರ ಜೀವಂತ ಕಪ್ಪೆ ಎಲ್ಲೂ ರಂಧ್ರಗಳೇ ಇಲ್ಲದ ಕ್ಯಾಪ್ಸಿಕಂ ಒಳಗೆ ಹೋಗಿದ್ದಾದರೂ ಹೇಗೆ? ಎಂಬ ಪ್ರಶ್ನೆ ಅವರನ್ನು ಕಾಡಿದೆ. ಈ ಘಟನೆಯ ನಂತರ ಅವರು ಕ್ವಿಬೆಕ್ ನ ಕೃಷಿ, ಮೀನುಗಾರಿಕೆ ಮತ್ತು ಆಹಾರ ಸಚಿವಾಲಯಕ್ಕೆ ಮಾಹಿತಿಯನ್ನು ನೀಡಿದ್ದಾರೆ.

ಸಚಿವಾಲಯವು,  ಕಪ್ಪೆ ಸಹಿತವಾದ ಕ್ಯಾಪ್ಸಿಕಂ ಅನ್ನು ಆ ದಂಪತಿಯಿಂದ ಪಡೆದು, ಕಪ್ಪೆಯ ಬಗ್ಗೆ ತಿಳಿಯಲು ಅದನ್ನು ಕೊಲ್ಲಬೇಕಾಯಿತು. ಆದರೂ ಅವರಿಗೆ ಸರಿಯಾದ ಮಾಹಿತಿ ದೊರೆಯಲಿಲ್ಲ. ಅಲ್ಲಿನ ಸಸ್ಯ ಶಾಸ್ತ್ರ ಪ್ರಾಧ್ಯಾಪಕರಾದ ಬ್ಯಾರಿ ಮೈಕಾಲೆಫ್ ಅವರು ಕೆಲವು ಪ್ರಾಕೃತಿಕ ಕಾರಣಗಳಿಂದ ಕ್ಯಾಪ್ಸಿಕಂ ನಲ್ಲಿ ಕ್ರಾಕ್ ಗಳು ಉಂಟಾಗುತ್ತವೆ. ಆಗ ಮರಿ ಕಪ್ಪೆ ಅದರೊಳಗೆ ಪ್ರವೇಶಿಸಿರಬಹುದು, ಅದು ಅಲ್ಲೇ ಬೆಳವಣಿಗೆ ಹೊಂದಿರಬಹುದು ಎಂದಿದ್ದಾರೆ.

- Advertisement -
spot_img

Latest News

error: Content is protected !!