Thursday, November 5, 2026
Homeತಾಜಾ ಸುದ್ದಿಉನ್ನತ ಶಿಕ್ಷಣ ಇಲಾಖೆಯಿಂದ ಸಿಎಂ ಸಹಾಯಹಸ್ತ ಎಂಬ ಉಚಿತ ಆನ್ ಲೈನ್ ತರಬೇತಿ ಯೋಜನೆ

ಉನ್ನತ ಶಿಕ್ಷಣ ಇಲಾಖೆಯಿಂದ ಸಿಎಂ ಸಹಾಯಹಸ್ತ ಎಂಬ ಉಚಿತ ಆನ್ ಲೈನ್ ತರಬೇತಿ ಯೋಜನೆ

- Advertisement -
- Advertisement -

ಬೆಂಗಳೂರು: ಕರ್ನಾಟಕದ ಸ್ಪರ್ಧಾರ್ಥಿಗಳಿಗೆ ಉನ್ನತ ಶಿಕ್ಷಣ ಇಲಾಖೆಯು ಮುಖ್ಯಮಂತ್ರಿ ವಿದ್ಯಾರ್ಥಿ ಸಹಾಯ ಹಸ್ತ ಎಂಬ ಉಚಿತ ಆನ್‌ಲೈನ್ ತರಬೇತಿ ಯೋಜನೆಯನ್ನು ಜಾರಿಗೆ ತಂದಿದೆ.

ಗೆಜೆಟೆಡ್ ಪ್ರೊಬೆಷನರಿ(ಪ್ರಿಲಿಮ್ಸ್), ಅಸಿಸ್ಟೆಂಟ್ ಪ್ರೊಫೆಸರ್, ಎಸಿ-ಎಸ್ಎಡಿ, ಎಫ್ ಡಿಎ, ಎಸ್ ಡಿಎ, ಪಿಡಿಒ, ಗ್ರೂಪ್-ಸಿ, ಪಿಎಸ್ಐ, ವಿಎಒ ಮತ್ತು ಪಿಸಿ ಸೇರಿದಂತೆ ವಿವಿಧ ಸರ್ಕಾರಿ ಹುದ್ದೆಗಳನ್ನು ಪಡೆಯಲು ಬಯಸುವ ರಾಜ್ಯದ ಸ್ಪರ್ಧಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.

ಈ ಯೋಜನೆಯಡಿ ಕರ್ನಾಟಕದ 90,000ಕ್ಕೂ ಹೆಚ್ಚು ಸ್ಪರ್ಧಾರ್ಥಿಗಳಿಗೆ ಸಂಪೂರ್ಣ ಉಚಿತವಾಗಿ ಆನ್‌ಲೈನ್ ತರಬೇತಿ ನೀಡಲಾಗುತ್ತದೆ.

ನೋಂದಣಿಗಾಗಿ https://sevaone.karnataka.gov.in/services/renderApplicationForm.do ಲಿಂಕ್ ನೀಡಲಾಗಿದ್ದು,
ನೋಂದಣಿ ಹೇಗೆ ಮಾಡಿಕೊಳ್ಳಬೇಕು ಎಂಬ ಸೂಚನಾ ವಿಡಿಯೋವನ್ನು
https://youtu.be/3kiYvf0ZsW4?si=K0p_D87wkHWwwDtL ಎಂಬ ಲಿಂಕ್ ನಲ್ಲಿ ವೀಕ್ಷಿಸಬಹುದಾಗಿದೆ.

ಅಲ್ಲದೇ 080-24410574 ಸಂಖ್ಯೆಯ ಸಹಾಯವಾಣಿಯನ್ನೂ ಉನ್ನತ ಶಿಕ್ಷಣ ಇಲಾಖೆ ಸ್ಥಾಪಿಸಿದ್ದು, ತರಗತಿಗಳು ಶೀಘ್ರದಲ್ಲೇ ಪ್ರಾರಂಭವಾಗಲಿವೆ.

- Advertisement -

Latest News

error: Content is protected !!