Friday, June 5, 2026
Homeತಾಜಾ ಸುದ್ದಿಇಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಂಡರೆ ಸಿಗುತ್ತೆ ಉಚಿತ ಬಿರಿಯಾನಿ

ಇಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಹಾಕಿಸಿಕೊಂಡರೆ ಸಿಗುತ್ತೆ ಉಚಿತ ಬಿರಿಯಾನಿ

- Advertisement -
- Advertisement -

ಬೆಂಗಳೂರು : ಗ್ರಾಹಕರನ್ನು ಸೆಳೆಯೋದಕ್ಕೆ ವ್ಯಾವಾಪಸ್ಥರು ಏನೆಲ್ಲಾ ಸರ್ಕಸ್ ಮಾಡ್ತಾರೆ, ಯಾವ ರೀತಿ ಆಫರ್ ಗಳನ್ನು ಕೊಡ್ತಾರೆ ಅನ್ನೋದನ್ನು ನೀವೆಲ್ಲಾ ನೋಡಿಯೇ ಇರ್ತೀರಾ. ಇದೀಗ ಪೆಟ್ರೋಲ್ ಬಂಕ್ ನ ಮಾಲೀಕರೊಬ್ಬರು ಗ್ರಾಹಕರಿಗೆ ಅಂತಹದ್ದೇ ಒಂದು ಆಫರ್ ನೀಡಿ ಸುದ್ದಿಯಾಗಿದೆ.

ಬೆಂಗಳೂರಿನ ಹಳೆ ಮದ್ರಾಸ್ ರಸ್ತೆ ಇಂದಿರಾನಗರ ಆರ್.ಟಿ.ಒ. ಬಳಿ ಇರುವ ಶ್ರೀ ವೆಂಕಟೇಶ್ವರ ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಒಸಿ) ಸರ್ವೀಸ್ ಸ್ಟೇಶನ್ ಗ್ರಾಹಕರಿಗೆ ಭಾರೀ ಉಡುಗೊರೆ ಘೋಷಿಸಿದೆ. ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಹಾಗೂ ಸಂಜೆ 5 ರಿಂದ ರಾತ್ರಿ 9 ಗಂಟೆವರೆಗೆ ಉಚಿತವಾಗಿ ಬಿರಿಯಾನಿ ನೀಡಲಾಗುತ್ತಿದೆ.

ಸುವರ್ಣ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಈ ಪೆಟ್ರೋಲ್ ಬಂಕ್, ಮೇನಕಾ ಹೋಟೆಲ್ ಸಹಯೋಗದೊಂದಿಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಬಿರಿಯಾನಿಯನ್ನು ಗ್ರಾಹಕರಿಗೆ ಕೊಡುತ್ತಿದೆ.

ಆದರೆ, 2 ಸಾವಿರ ರೂ.ಗೆ ಹೆಚ್ಚಿನ ಮೌಲ್ಯದ ಪೆಟ್ರೋಲ್‌ – ಡಿಸೇಲ್ ಹಾಕಿಸಿಕೊಂಡ ಗ್ರಾಹಕರಿಗೆ ಉಚಿತ ಬಿರಿಯಾನಿ ಮಾತ್ರವಲ್ಲದೆ, 250 ರೂ.ಗಿಂತ ಅಧಿಕ ಬೆಲೆಯ ಪೆಟ್ರೋಲ್‌ – ಡಿಸೇಲ್ ಹಾಕಿಸಿಕೊಂಡವರಿಗೆ ಆಕರ್ಷಕ ಉಡುಗೊರೆಗಳನ್ನು ನೀಡುತ್ತಿದೆ.

ಸರ್ವೀಸ್ ಸ್ಟೇಷನ್ ಮುಖ್ಯಸ್ಥ ಪ್ರಕಾಶ್ ರಾವ್ ಸಾಥೆ ಮಾತನಾಡಿ, 51 ವರ್ಷದಿಂದ ಸೇವೆ ಸಲ್ಲಿಸುತ್ತಿರುವ ಸರ್ವೀಸ್ ಸ್ಟೇಷನ್, ಕರ್ನಾಟಕದಲ್ಲಿ ಅತಿ ಹೆಚ್ಚು ವಹಿವಾಟು ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆ ನೀಡಲು ನಿರ್ಧರಿಸಿದ್ದು, ತಿಂಗಳಿಡೀ ಈ ಉಡುಗೊರೆ ಇರಲಿದೆ. ಅಲ್ಲದೆ, ಶೇ.50 ರ ರಿಯಾಯಿತಿ ದರದಲ್ಲಿ ಕೆಲ ಉತ್ಪನ್ನಗಳನ್ನೂ ಮಾರಾಟ ಮಾಡಲಾಗುತ್ತಿದೆ ಎಂದಿದ್ದಾರೆ.

- Advertisement -

Latest News

error: Content is protected !!