Friday, June 5, 2026
Homeತಾಜಾ ಸುದ್ದಿದೇವೇಗೌಡರ ಓಡಾಟಕ್ಕೆ 60 ರೂ. ಲಕ್ಷ ಮೌಲ್ಯದ ಹೊಸ ಕಾರು ಒದಗಿಸಿದ ಯಡಿಯೂರಪ್ಪರ ಸರ್ಕಾರ

ದೇವೇಗೌಡರ ಓಡಾಟಕ್ಕೆ 60 ರೂ. ಲಕ್ಷ ಮೌಲ್ಯದ ಹೊಸ ಕಾರು ಒದಗಿಸಿದ ಯಡಿಯೂರಪ್ಪರ ಸರ್ಕಾರ

- Advertisement -
- Advertisement -

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಭಾನುವಾರದಂದು ರಾಜ್ಯಸಭಾ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅವರು ಈಗ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿರುವ ದೇವೇಗೌಡರ ಓಡಾಟಕ್ಕೆ ರಾಜ್ಯ ಸರ್ಕಾರ ಹೊಸ ಕಾರು ಒದಗಿಸಿದ್ದು, ಈಗ ಅತಿ ದುಬಾರಿ ಸರ್ಕಾರಿ ಕಾರು ಬಳಸುತ್ತಿರುವ ರಾಜಕಾರಣಿ ಎಂಬ ಹಿರಿಮೆಗೆ ರಾಜ್ಯಸಭಾ ಸದಸ್ಯ ಹೆಚ್.ಡಿ ದೇವೇಗೌಡರು ಪಾತ್ರರಾಗಿದ್ದಾರೆ. ಅವರಿಗೆ ಸರ್ಕಾರದಿಂದ ನೀಡಿರುವ ಕಾರು ವೊಲ್ವೊ ಕಂಪನಿಯ ಎಕ್ಸ್’ಸಿ60 ಡಿ5 ಮಾಡೆಲ್ ಕಾರು.

ವೊಲ್ವೊ ಎಕ್ಸ್’ಸಿ60 ಡಿ5 ಕಾರಿನ ಎಕ್ಸ್ ಶೋರೂಂ ಬೆಲೆ ರೂ. 59,90,000, ಆರ್’ಟಿಓ ಶುಲ್ಕ ರೂ. 12,39,040, ವಿಮೆ ಶುಲ್ಕ ರೂ. 3,25,296, ಟಿಸಿಎಸ್ ಶುಲ್ಕ ರೂ. 44,925, ಫಾಸ್ ಟ್ಯಾಗ್ ಶುಲ್ಕ ರೂ. 500, ಇವಿಷ್ಟು ಸೇರಿದರೆ ಕಾರಿನ ಬೆಲೆ ರೂ. 75,99,761 ಆಗಲಿದೆ. ಆದರೆ ಸರ್ಕಾರದ ಹೆಸರಿನಲ್ಲಿ ಖರೀದಿಸುವ ಕಾರಣ ತೆರಿಗೆ ಅನ್ವಯಿಸುವುದಿಲ್ಲ. ಹೀಗಾಗಿ ಇದರ ಬೆಲೆ 60 ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ.

ದೇವೇಗೌಡರು ರಾಜ್ಯಸಭಾ ಸದಸ್ಯರಾದ ಬಳಿಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ಕಾರಿಗೆ ಅನುಮೋದನೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ಟಯೋಟಾ ಫಾರ್ಚುನರ್ ಗಳನ್ನೇ ಬಳಸುತ್ತಿದ್ದಾರೆ. ಆದರೆ ಇದೆ ಮೊದಲ ಬಾರಿಗೆ ವೊಲ್ವೊದಂತಹ ದುಬಾರಿ ಸರ್ಕಾರಿ ಕಾರು ರಾಜಕಾರಣಿಗಳ ಬಳಕೆಗೆ ಬರುತ್ತಿರುವುದು. ಇನ್ಮುಂದೆ ಇಂತಹ ದುಬಾರಿ ಸರ್ಕಾರಿ ಕಾರುಗಳು ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸೇರಿದಂತೆ ಸಚಿವ ಸಂಪುಟ ಸದಸ್ಯರಿಗೂ ವಿಸ್ತರಣೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ದೇವೇಗೌಡರು ಸರ್ಕಾರಕ್ಕೆ ಇಂತಹದ್ದೇ ಕಾರು ಬೇಕು ಎಂದು ಮನವಿ ಮಾಡಿರಲಿಲ್ಲ. ಸರ್ಕಾರವೇ ಈ ನಿರ್ಧಾರ ತೆಗೆದುಕೊಂಡು ಈ ಕಾರು ಖರೀದಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳ 24ರಂದು ಈ ಕಾರು ಸರ್ಕಾರದ ಮುಖ್ಯ ಕಾರ್ಯದರ್ಶಿ ಹೆಸರಿನಲ್ಲಿ ನೊಂದಣೆಯಾಗಿದ್ದು ಕಾರಿಗೆ ಕೆಎ 53 ಜಿ 3636 ಸಂಖ್ಯೆ ನೀಡಲಾಗಿದೆ.

- Advertisement -

Latest News

error: Content is protected !!