Thursday, June 4, 2026
Homeಕರಾವಳಿಉಡುಪಿಕಾರ್ಕಳದಲ್ಲಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಪ್ರಕರಣ; . ಆರೋಪಿ ಇಚರ್‌ ಚಾಲಕ ಹೇಮಂತ್‌ ಅರೆಸ್ಟ್

ಕಾರ್ಕಳದಲ್ಲಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಪ್ರಕರಣ; . ಆರೋಪಿ ಇಚರ್‌ ಚಾಲಕ ಹೇಮಂತ್‌ ಅರೆಸ್ಟ್

- Advertisement -
- Advertisement -

ಕಾರ್ಕಳದಲ್ಲಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಇಚರ್‌ ಚಾಲಕ ಹೇಮಂತ್‌  ನನ್ನು ಅರೆಸ್ಟ್ ಮಾಡಲಾಗಿದೆ.

 ನಿನ್ನೆ ಮಧ್ಯಾಹ್ನ 5.50 ರಿಂದ  16 ಗಂಟೆಯ ಸಮಯದಲ್ಲಿ ಒಂದು ಇಚರ್‌ ಲಾರಿ KA41D0227 ಬಜಗೋಳಿ ಕಡೆಯಿಂದ ಧರ್ಮಸ್ಥಳ ಕಡೆಗೆ ಚಲಿಸುತ್ತಿದ್ದು, ವೇಣೂರು ಕಡೆಯಿಂದ KA21R5236 ಡಿಸ್ಕವರಿ ಮೋಟಾರು ಸೈಕಲ್‌ ಮೂಲಕ ನಲ್ಲೂರಿಗೆ ತೆರಳುತ್ತಿದ್ದು, ಇದನ್ನು ಸುರೇಶ್‌ ಆಚಾರ್ಯ(35) ಇವರು ಚಲಾಯಿಸುತ್ತಿದು, ಅದರಲ್ಲಿ ಅವರ ಪತ್ನಿ ಮೀನಾಕ್ಷಿ(32), ಸುಮೀಕ್ಷಾ(7), ಸುಶ್ಮಿತಾ(5) ಸುಶಾಂತ್‌(2 ) ಇವರನ್ನು ಕುಳ್ಳಿರಿಸಿಕೊಂಡು ಹೋಗುವಾಗ ಪಾಜೆಗುಡ್ಡೆ ತಿರುವಿನಲ್ಲಿ ಇಚರ್‌ ಲಾರಿಯ ಚಾಲಕ ಅತೀ ವೇಗ ಹಾಗೂ ಅಜಾರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸದರಿ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಚಾಲಕರಾದ ಸುರೇಶ, ಸುಮೀಕ್ಷಾ, ಸುಶಾಂತ್‌ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.

ಸುಶ್ಮಿತಾ ಹಾಗೂ ಮೀನಾಕ್ಷಿ ರವರನ್ನು ಕಾರ್ಕಳ ರೋಟರಿ ಆಸ್ಪತ್ರೆಗೆ ಸಾಗಿಸಿದ್ದು, ಅದರಲ್ಲಿ ಶುಶ್ಮಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ. ಮೀನಾಕ್ಷಿಯವರು ಗಂಭೀರ ಸ್ಥಿತಿಯಲ್ಲಿರುತ್ತಾರೆ. ಆರೋಪಿ ಇಚರ್‌ ಚಾಲಕ ಹೇಮಂತ್‌ ನನ್ನು ವಶಕ್ಕೆ ಪಡೆಯಲಾಗಿದೆ.

- Advertisement -

Latest News

error: Content is protected !!