Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಸ್ಕೂಟಿ ಸವಾರನಿಗೆ ಕಚ್ಚಿದ ಸೀಟಿನಲ್ಲಿ ಅವಿತಿದ್ದ ವಿಷಕಾರಿ ಕನ್ನಡಿ ಹಾವು

ಮಂಗಳೂರು; ಸ್ಕೂಟಿ ಸವಾರನಿಗೆ ಕಚ್ಚಿದ ಸೀಟಿನಲ್ಲಿ ಅವಿತಿದ್ದ ವಿಷಕಾರಿ ಕನ್ನಡಿ ಹಾವು

- Advertisement -
- Advertisement -

ಮಂಗಳೂರು; ಸ್ಕೂಟಿ ಸವಾರನಿಗೆ ಸೀಟಿನಲ್ಲಿ ಅವಿತಿದ್ದ ವಿಷಕಾರಿ ಕನ್ನಡಿ ಹಾವು ಕಚ್ಚಿದ ಘಟನೆ ಮಂಗಳೂರು ಹೊರವಲಯದ ಕುಪ್ಪೆಪದವಿನಲ್ಲಿ ನಡೆದಿದೆ.

ಕುಪ್ಪೆಪದವಿನ ಇಮ್ತಿಯಾಜ್ ಎಂಬವರಿಗೆ ವಿಷಕಾರಿ ಕನ್ನಡಿ ಹಾವು ಕಚ್ಚಿದೆ. ಸದ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಮ್ತಿಯಾಝ್‌ ಅವರು ಶುಕ್ರವಾರ ರಾತ್ರಿ ಮಸೀದಿಗೆ ಹೋಗಲೆಂದು ತನ್ನ ಇಲೆಕ್ಟ್ರಿಕ್‌ ದ್ವಿಚಕ್ರ ವಾಹನದ ಸೀಟು ತೆರೆದು ವಾಹನದ ಕಾಗದ ಪತ್ರ ಇಡುತ್ತಿದ್ದ ವೇಳೆ ಅವರ ಕೈ ಬೆರಳಿಗೆ ಹಾವು ಕಚ್ಚಿದೆ. ತಕ್ಷಣ ಮನೆ ಮಂದಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!