Thursday, June 4, 2026
HomeUncategorizedಭೀಕರ ರಸ್ತೆ ಅಪಘಾತ- ದುರ್ಘಟನೆಯಲ್ಲಿ ನಾಲ್ವರು ಮಕ್ಕಳು ಸಾವು!..

ಭೀಕರ ರಸ್ತೆ ಅಪಘಾತ- ದುರ್ಘಟನೆಯಲ್ಲಿ ನಾಲ್ವರು ಮಕ್ಕಳು ಸಾವು!..

- Advertisement -
- Advertisement -

ಆಂಧ್ರಪ್ರದೇಶ:ಇಲ್ಲಿನ ಕರ್ನೂಲ್ ಜಿಲ್ಲೆಯಲ್ಲಿ ಕರ್ನೂಲ್-ಚಿತ್ತೂರಿ ಹೆದ್ದಾರಿ ದಾಟುವ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿ 15ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಕುರಿತು ವರದಿಯಾಗಿದೆ.

ಇಂದು ಬೆಳಗಿನ ಜಾವ ಕ್ರಿಸ್ಮಸ್ ಹಿನ್ನೆಲೆಯಲ್ಲಿ ಯೆರ್ರಾಕುಂಟ್ಲಾದ ಸ್ಥಳೀಯರು ಹಾಗೂ 30 ಮಕ್ಕಳು ಪ್ರಾರ್ಥನೆಗಾಗಿ ಚರ್ಚ್ ಗೆ ತೆರಳುತ್ತಿದ್ದವೇಳೆ ವ್ಯಾನ್ ವೊಂದು ವೇಗವಾಗಿ ಬಂದಿದ್ದು, ರಭಸದಿಂದ ಡಿಕ್ಕಿ ಹೊಡೆದಿದೆ.

ಅಪಘಾತದ ತೀವ್ರತೆಗೆ ಇಬ್ಬರು ಮಕ್ಕಳು ಸ್ಥಳದಲ್ಲಿಯೇ ಸಾವನ್ನಪ್ಪಿ್ದರೆ ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಗಂಭೀರವಾಗಿ ಗಾಯಗೊಂಡಿರುವ ಹಲವರ ಸ್ಥಿತಿ ಚಿಂತಾಜನಕವಾಗಿದೆ.

- Advertisement -

Latest News

error: Content is protected !!