Friday, October 11, 2024
Homeಕ್ರೀಡೆಕೊರೋನಾ ಕಳವಳ: 89ನೇ ವಯಸ್ಸಿಗೆ ಮತ್ತೆ ತಂದೆಯಾದ ಫಾಮುಲಾ ಒನ್ ಮುಖ್ಯಸ್ಥ

ಕೊರೋನಾ ಕಳವಳ: 89ನೇ ವಯಸ್ಸಿಗೆ ಮತ್ತೆ ತಂದೆಯಾದ ಫಾಮುಲಾ ಒನ್ ಮುಖ್ಯಸ್ಥ

spot_img
- Advertisement -
- Advertisement -

ಲಂಡನ್: ಇಡೀ ಜಗತ್ತು ಕರೊನಾ ವೈರಸ್​ನಿಂದಾಗಿ ಕಳವಳದಲ್ಲಿರುವ ನಡುವೆ ಫಾಮುಲಾ ಒನ್ ಮಾಜಿ ಮುಖ್ಯಸ್ಥ ಬೆರ್ನಿ ಎಕ್ಲೆಸ್ಟೋನ್ ಸಿಹಿ ಸುದ್ದಿಯೊಂದನ್ನು ಪಡೆದಿದ್ದಾರೆ. 89 ವರ್ಷದ ಎಕ್ಲೆಸ್ಟೋನ್ ಅವರಿಗಿಂತ ಅರ್ಧವಯಸ್ಸಿನ ಪತ್ನಿ ಫ್ಯಾಬಿಯಾನಾ ಫೋಸಿ ತಾಯಿಯಾಗುತ್ತಿದ್ದು, ಜೂನ್​ನಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ.

1978ರಿಂದ 2017ರ ನಡುವೆ ಎಫ್1 ಮುಖ್ಯಸ್ಥರಾಗಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ಎಕ್ಲೆಸ್ಟೋನ್, ಹಿಂದಿನ ಇಬ್ಬರು ಪತ್ನಿಯರಿಂದ ಈಗಾಗಲೆ ಮೂವರು ವಯಸ್ಕ ಪುತ್ರಿಯರನ್ನು ಹೊಂದಿದ್ದಾರೆ. ವರ್ಣರಂಜಿತ ವ್ಯಕ್ತಿತ್ವದ ಎಕ್ಲೆಸ್ಟೋನ್ ಸದ್ಯ ಬ್ರೆಜಿಲ್​ನಲ್ಲಿ ನೆಲೆಸಿದ್ದು, ‘ನನಗೆ 89 ಮತ್ತು 29ರ ನಡುವೆ ಯಾವುದೇ ವ್ಯತ್ಯಾಸ ಕಾಣಿಸುವುದಿಲ್ಲ. ಇದರಲ್ಲಿ ಏನೂ ಅಸಾಧಾರಣವಿಲ್ಲ’ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!