Thursday, April 18, 2024
Homeಕರಾವಳಿಪ್ರಧಾನಿ ಮೋದಿಯ ದೀಪ ವಂದನೆ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ

ಪ್ರಧಾನಿ ಮೋದಿಯ ದೀಪ ವಂದನೆ ಕಾರ್ಯಕ್ರಮಕ್ಕೆ ಬೆಂಬಲ ಸೂಚಿಸಿದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ

spot_img
- Advertisement -
- Advertisement -

ಬೆಳ್ತಂಗಡಿ: ನಮ್ಮ ಭಾರತ ದೇಶದ ಪ್ರಜೆಗಳು ನಾವೆಲ್ಲರೂ ಒಗ್ಗಾಟ್ಟಾಗಿದೇವೆ, ಒಂದಾಗಿದೇವೆ ಮತ್ತು ವಿಶ್ವದ ಜತೆಗೆ ನಾವು ಕೈಜೋಡಿಸಿದ್ದೇವೆ. ಈ ಕೈ ಜೋಡಿಸುವಿಕೆಯಲ್ಲಿ ಎರಡು ರೀತಿಯಿದೆ. ಒಂದು ಕೊರೊನಾ ವ್ಯಾಧಿ ಇಂದು ವಿಶ್ವದ ಎಲ್ಲಾ ದೇಶಗಳಿಗೂ ಪಸರಿಸಿದೆ. ಹಾಗೇ ಒಂದಾಗಿದ್ದೇವೆ. ಅದರ ವಿರುದ್ದ ಹೋರಾಟ ಮಾಡುವಲ್ಲಿಯೂ ನಾವು ವಿಶೇಷವಾದ ಪ್ರಜ್ಞೆಯನ್ನು, ಏಕತೆಯನ್ನು, ಸಂಘಟನೆಯನ್ನು ತೋರಿಸಿದ್ದೇವೆ ಎಂದು ಧರ್ಮಸ್ಥಳ ಕ್ಷೆತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದ್ದಾರೆ.

ವಿಡಿಯೋ ಸಂದೇಶ ನೀಡಿರುವ ಪೂಜ್ಯ ಖಾವಂದರು


ಈ ಕುರಿತು ವಿಡಿಯೋ ಸಂದೇಶ ನೀಡಿರುವ ಪೂಜ್ಯ ಖಾವಂದರು, ಇತ್ತೀಚಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಕರೆಯನ್ನು ಕೊಟ್ಟಿದ್ದಾರೆ. ಒಂದು ಯಾರ‍್ಯಾರು ಈ ಕೊರೊನಾ ವಿರುದ್ದ ಹೋರಾಟ ಮಾಡುತ್ತಿದ್ದಾರೆ (ವೈದ್ಯರು, ದಾದಿಯರು ಕಾರ್ಯಕರ್ತರಿಗೆ) ಇವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅದರ ಜತೆಗೆ ನಾವು ಮನೆಯಲ್ಲಿ ಕುಳಿತಾಗ ಇತರರ ಬಗ್ಗೆಯೂ ಚಿಂತನೆ ಮಾಡಬೇಕು. ಇಡೀ ದೇಶದ ನಾವೆಲ್ಲರೂ ಇತರರ ಸಂತೋಷವನ್ನು ಹಂಚಿಕೊಂಡು ತಿನ್ನಬೇಕು. ದುಃಖವನ್ನು ಹಂಚಿಕೊಂಡು ಅಲ್ಲ ಹಾಗೇಯೇ ಎಲ್ಲರ ಭವಿಷ್ಯವನ್ನು, ನೆಮ್ಮದಿಯನ್ನು ನೋಡಿಕೊಂಡು ನಾವು ಸಂಘಟಿತರಾಗಬೇಕು. ನಾವು ಇನ್ನೊಬ್ಬರ ದುಃಖಕ್ಕೆ ಕಾರಣರಾಗಬಾರದು. ಅದಕ್ಕಾಗಿ ಮತ್ತೊಮ್ಮೆ ನಾವು ಸಂಘಟಿತರಾಗಬೇಕಾಗಿದೆ. ಇಂದು ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಇಡೀ ದೇಶದ ಪ್ರಜೆಗಳು ದೀಪವನ್ನು ಆರಿಸಿ ಮನೆಯಲ್ಲಿ ಇರತಕ್ಕಂತಹ ಜ್ಯೋತಿಯನ್ನು ಬೆಳಗಿಸಿ, ತಾವು ಕೂಡಾ ಜ್ಯೋತಿಯ ಜತೆ ಐಕ್ಯವಾಗಬೇಕು, ಎಲ್ಲಾ ಸುಖ ದುಃಖದೊಂದಿಗೆ ಬೆರೆಯಬೇಕು ಎಂದು ಹೇಳಿದ್ದಾರೆ, ಶುಭವನ್ನು ಹಾರೈಸಬೇಕು ಎಂದು ಹೇಳಿದ್ಧಾರೆ.

ನಾವು ಜಾತಿ ಹೀನನ ಮನೆಯ ಜ್ಯೋತಿ ತ ಹೀನವೇ ಎಂದು ಹೇಳಿದ್ದಾರೆ, ಯಾವ ಜಾತಿ ಮತ ಸಂಪ್ರದಾಯ ಇರಲಿ, ಅನು ಚಕ್ರವರ್ತಿಯೇ ಇರಲಿ. ಅವನು ಶ್ರೀ ಸಾಮಾನ್ಯನೇ ಇರಲಿ ಅವನ ಮನೆಯಲ್ಲಿರುವ ಜ್ಯೋತಿ ಒಂದೇ ಬೆಲೆಯದ್ದಾಗಿರುತ್ತದೆ, ಒಂದೇ ರೀತಿಯ ಪ್ರಕಾಶವನ್ನು ಕೊಡುತ್ತದೆ.
ಅದಕ್ಕಾಗಿ ನಾವು ನಮ್ಮ ಅಂತಸ್ತು ಮತ್ತು ಇತರ ಎಲ್ಲಾ ಪ್ರಾದೇಶಿಕ ವಿಚಾರಗಳು ಮರೆತು ನಮ್ಮ ನಮ್ಮ ಮನೆಯಲ್ಲಿ ಜ್ಯೋತಿಯನ್ನು ಹಚ್ಚಿ ಹೇಗೆ ಸೂರ್ಯನ ಬೆಳಕು ಇದ್ದಾಗ ಜ್ಯೋತಿಗೆ ಬೆಲೆ ಇರುವುದಿಲ್ಲ. ಆದರೆ ರಾತ್ರಿ ಹೊತ್ತಾದಾಗ ಆ ಸಣ್ಣ ಜ್ಯೋತಿ ಹೇಳುತ್ತದೆ ಅಂತೆ ಸೂರ್ಯ ನೀ ಇಲ್ಲದಿದ್ದಾಗ ನಾನು ಈ ಕೋಣೆಗೆ ಬೆಳಕನ್ನು ಕೊಡುತ್ತೇನೆ. ಪ್ರಪಂಚಕ್ಕೆ ಕೊಡಲಿಕ್ಕೆ ಸಾಧ್ಯವಿಲ್ಲ ಆದರೆ ನಾನು ಇರುವಂತ ಪ್ರದೇಶಕ್ಕೆ ಬೆಳಕನ್ನು ಕೊಡುತ್ತೇನೆ.

ಆದರಿಂದ ನಾವೆಲ್ಲರೂ ಕೂಡಾ ಸಣ್ಣ ಸಣ್ಣ ಜ್ಯೋತಿಗಳು. ರಾತ್ರಿ ಈ ಜ್ಯೋತಿಯನ್ನು ಹಚ್ಚಬೇಕು ಅಂತ ಮಾನ್ಯ ಪ್ರದಾನಿಗಳು ಹೇಳಿದ್ದಾರೆ. ನಾವು ರಾತ್ರಿ ಹೊತ್ತಿನಲ್ಲಿ ಸಣ್ಣ ಜ್ಯೋತಿ ಹಚ್ಚಿ ಈ ಸಣ್ಣ ಜ್ಯೋತಿ ಇದು ಕೇವಲ ನನ್ನ ಮನೆಯ ಜ್ಯೋತಿ ಆದರೂ ಕೂಡಾ ನನ್ನ ಮನೆಯಲ್ಲಿರುವ ಎಲ್ಲಾ ಕುಟುಂಬದ ಸದಸ್ಯರ ಮನೆಗೆ ಬೆಳಕನ್ನು, ಕೊಡುವ ಮನಸ್ಸಿಗೆ ಬೆಳಕನ್ನು ಕೊಟ್ಟರೆ ಇಡೀ ನಮ್ಮ ದೇಶಕ್ಕೆ ಸುಭಿಕ್ಷೆ ಆಗುತ್ತದೆ. ಆ ಮೂಲಕ ವಿಶ್ವಕ್ಕೆ ಸುಭಿಕ್ಷೆ ಆಗುತ್ತದೆ ಎಂಬ ಸಂದೇಶವಾಗುತ್ತದೆ. ಇದನ್ನು ನೀವೆಲ್ಲರೂ ದಯವಿಟ್ಟು ಪ್ರೀತಿಯಿಂದ ಆಸ್ವಾದಿಸಿ, ಆನಂದಿಸಿ, ಸ್ವೀಕರಿಸಿ.

ಭಾನುವಾರದಂದು ರಾತ್ರಿ ಒಂಬತ್ತು ಗಂಟೆಗೆ, ಒಂಬತ್ತು ನಿಮಿಷಗಳ ಕಾಲ ಜ್ಯೋತಿ ಹಚ್ಚಿ ಶುಭವನ್ನು ಹಾರೈಸಿ, ಮನಸ್ಸಿನ ಕತ್ತಲೆಯನ್ನು ಓಡಿಸಿ, ದೇಶದಿಂದ ಈ ಕ್ರೂರವಾದಂತಹ ಕೊರೊನಾ ರಾಕ್ಷಸನನ್ನು ಓಡಿಸಿ ಎಂಬ ಸಂದೇಶವನ್ನು ಕೊಡುತ್ತೇನೆ. ನಾವು ಕೂಡಾ ಧರ್ಮಸ್ಥಳ ದೇವಸ್ಥಾನದಲ್ಲಿ ರಾತ್ರಿ ಒಂಬತ್ತು ಗಂಟೆಗೆ ಈ ಜ್ಯೋತಿಯನ್ನು ಹಚ್ಚುತ್ತೇವೆ, ಇದರ ಫಲವಾಗಿ ನಮ್ಮ ನಾಡಿಗೆ, ರಾಷ್ಟ್ರಕ್ಕೆ, ವಿಶ್ವಕ್ಕೆ ಶುಭವಾಗಲಿ ಎಂದು ನಾಡಿಗೆ ಸಂದೇಶ ನೀಡಿದ್ದಾರೆ.

- Advertisement -
spot_img

Latest News

error: Content is protected !!