Tuesday, September 10, 2024
Homeತಾಜಾ ಸುದ್ದಿಶೇ.40ರಷ್ಟು ಕುಸಿತಗೊಂಡ ಮಾಲಿನ್ಯ, ಶುದ್ಧವಾದ ಗಾಳಿಯೋ ಗಾಳಿ.!

ಶೇ.40ರಷ್ಟು ಕುಸಿತಗೊಂಡ ಮಾಲಿನ್ಯ, ಶುದ್ಧವಾದ ಗಾಳಿಯೋ ಗಾಳಿ.!

spot_img
- Advertisement -
- Advertisement -

ಬೆಂಗಳೂರು : ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಲಾಕ್‌ಡೌನ್ ಘೋಷಿಸಿದ ಬಳಿಕ ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಎಲ್ಲಾ ನಗರಗಳಲ್ಲಿನ ವಾಯುಮಾಲಿನ್ಯ ಗಣನೀಯವಾಗಿ ಕುಸಿದಿದ್ದು, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್, ಟ್ಯಾಕ್ಸಿ, ಆಟೋರಿಕ್ಷಾ, ಖಾಸಗಿ ಕಾರು, ಬೈಕ್‌ಗಳ ಓಡಾಟ ನಿಲ್ಲಿಸಿದ್ದರ ಪರಿಣಾಮ ರಾಜ್ಯದಲ್ಲಿ ವಾಯುಮಾಲಿನ್ಯದ ಪ್ರಮಾಣ ಇಳಿಕೆಯಾಗಿದೆ.

ಕೈಗಾರಿಕೆಗಳೂ ಬಂದ್ ಆಗಿರುವುದರಿಂದ ಗಾಳಿಯಲ್ಲಿದ್ದ ನೈಟ್ರೋಜನ್ ಡೈ ಆಕ್ಸೈಡ್, ಕಾರ್ಬನ್ ಮಾನೋಕ್ಸೈಡ್, ಕಾರ್ಬನ್ ನಂತಹ ವಿಷಕಾರಿ ಅನಿಲಗಳು ಶೇ.70 ರಷ್ಟು ಕಡಿಮೆಯಾಗಿದ್ದು, ಬೆಂಗಳೂರು ಸೇರಿ ರಾಜ್ಯದ ವಿವಿಧ ನಗರಗಳ ಗಾಳಿಯ ಗುಣಮಟ್ಟ ಮೂರು ದಶಕದ ಹಿಂದಿನಷ್ಟು ಶುದ್ಧವಾಗಿದೆ.
ಕಳೆದ ಮಾರ್ಚ್ 2 ರಿಂದ 20ರವರೆಗಿನ ಅವಧಿಯಲ್ಲಿ ನಗರದ ವಾಯುಮಾಲಿನ್ಯ ಶೇ 40 ರಷ್ಟು ಕುಸಿದಿತ್ತು. ಇದೀಗ ಈ ಮಾಲಿನ್ಯ ಪ್ರಮಾಣ ಶೇ. 65 ರಷ್ಟು ಕಡಿಮೆಯಾಗಿದೆ. ಅಂಕಿ ಅಂಶಗಳ ಪ್ರಕಾರ ಹೇಳುವುದಾದರೆ ಕೊರೊನಾ ಭೀತಿ ಆರಂಭವಾಗುವವರೆಗೆ ವಾಯು ಗುಣಮಟ್ಟ ಸೂಚ್ಯಂತ (ಎಕ್ಯೂಐ)ದ ಪ್ರಕಾರ ನಗರದ ವಾಯು ಮಾಲಿನ್ಯ ವಿಪರೀತ ಹೆಚ್ಚಿತ್ತು.

ಕೊರೊನಾ ಭೀತಿ ಶುರುವಾದ ಬಳಿಕ ಮತ್ತು ಲಾಕ್‌ಡೌನ್ ಘೋಷಣೆಯಾದ ನಂತರ ಗಣನೀಯವಾಗಿ ಇಳಿಯುತ್ತಾ ಬಂದಿದೆ. ಕೊರೊನಾ ಭೀತಿಗೆ ಶುದ್ಧವಾಯ್ತು ಉದ್ಯಾನ ನಗರಿಯ ಗಾಳಿ ಕೊರೊನಾ ಭೀತಿಗೆ ಶುದ್ಧವಾಯ್ತು ಉದ್ಯಾನ ನಗರಿಯ ಗಾಳಿನಗರದ ಪ್ರಮುಖ ಸ್ಥಳಗಳಾದ ಕೋರಮಂಗಲದಲ್ಲಿ ಮೊದಲಿಗೆ 128 ರಷ್ಟಿದ್ದ ಎಕ್ಯೂಐ, ಕೊರೊನಾ ಭೀತಿ ಆರಂಭವಾದ ಬಳಿಕ 86ಕ್ಕೆ ಇಳಿದಿದೆ.

ಇದೀಗ 40ಕ್ಕೆ ಬಂದು ನಿಂತಿದೆ. ಅದೇ ರೀತಿ ಇಂದಿರಾನಗರದಲ್ಲಿ 84 ರಿಂದ 57ಕ್ಕಿಳಿದಿದೆ. ಪ್ರಸ್ತುತ 41ಕ್ಕೆ ಕುಸಿದಿದೆ. ಎಂಜಿ ರಸ್ತೆಯಲ್ಲಿ 90 ರಿಂದ 42ಕ್ಕಿಳಿದಿದ್ದು, ಇದೀಗ 37ಕ್ಕೆ ಬಂದಿದೆ. ಬನ್ನೇರುಘಟ್ಟ ರಸ್ತೆಯಲ್ಲಿ 146 ರಿಂದ 66 ಕ್ಕೆ ಇಳಿದು, ಸದ್ಯ 45ಕ್ಕೆ ಬಂದು ನಿಂತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೂಲಗಳು ತಿಳಿಸಿವೆ.

- Advertisement -
spot_img

Latest News

error: Content is protected !!