ಕೊರೋನಾವೈರಸ್ ಗೆ ತುತ್ತಾಗಿರುವ ರಾಷ್ಟ್ರಗಳಲ್ಲಿ ಪಾಪಿ ಪಾಕಿಸ್ತಾನವೂ ಒಂದು . ಆದರೆ ಕನಿಷ್ಟ ವೈದ್ಯಕೀಯ ನೆರವನ್ನು ಜನರಿಗೆ ಒದಗಿಸುವಲ್ಲಿ ವಿಫಲವಾಗಿರುವ ಪಾಕಿಸ್ತಾನಕ್ಕೆ ಚೀನಾ ನೆರವಿನ ಹಸ್ತ ಚಾಚಿತ್ತು. ಆದರೆ ಇದೀಗ ತನ್ನ ಪರಮ ಸ್ನೇಹಿತ ರಾಷ್ಟ್ರಪಾಕಿಸ್ತಾನಕ್ಕೆ ಚೀನಾ ಒಳ ಉಡುಪುಗಳಿಂದ ತಯಾರಿಸಿದ ಮಾಸ್ಕನ್ನು ರವಾನಿಸಿದ ಘಟನೆ ವರದಿಯಾಗಿದೆ.
ಅತ್ಯುತ್ತಮ ಗುಣಮಟ್ಟದ ಎನ್ – 95 ಮಾಸ್ಕ್ ಗಳನ್ನು ಸರಬರಾಜು ಮಾಡುವುದಾಗಿ ಚೀನಾ ಪಾಕಿಸ್ತಾನಕ್ಕೆ ಭರವಸೆ ನೀಡಿತ್ತು . ಅವುಗಳನ್ನು ಪೂರೈಕೆ ಮಾಡಲು ಗಡಿ ತೆರೆಯುವಂತೆ ಸೂಚಿಸಿತ್ತು . ಇದನ್ನು ಕಣ್ಣುಮುಚ್ಚಿ ನಂಬಿದ್ದ ಪಾಕ್ ಚೀನಾ ಸರಬರಾಜು ಮಾಡಿದ ಎಲ್ಲಾ ಮಾಸ್ಕ್ ಗಳನ್ನು ಆಸ್ಪತ್ರೆಗಳಿಗೆ ವಿತರಿಸಿತ್ತು .
ವೈರಸ್ ವಿರುದ್ಧ ಹೋರಾಡಲು ಮುಖ್ಯವಾಗಿ ವೈದ್ಯರು ಮತ್ತು ಅರೆವೈದ್ಯರು ಬಳಸುವ 200,000 ಸಾಮಾನ್ಯ ಫೇಸ್ ಮಾಸ್ಕ್ , 2,000 ಎನ್ -95 ಫೇಸ್ ಮಾಸ್ಕ್ , ಐದು ವೆಂಟಿಲೇಟರ್ , 2,000 ಟೆಸ್ಟಿಂಗ್ ಕಿಟ್ ಮತ್ತು 2,000 ವೈದ್ಯಕೀಯ ಸಾಮಾಗ್ರಿಗಳನ್ನು ರಾಜ್ಯಪಾಲರು ದಾನ ಮಾಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ . ಇವೆಲ್ಲವನ್ನೂ 2019 ರಲ್ಲಿ ಚೀನಾದಲ್ಲಿ ತಯಾರಿಸಲಾಯಿತು . ಆದರೆ ಆ ಎಲ್ಲಾ ಮಾಸ್ಕ್ ಗಳನ್ನು ಚೀನಾ ಒಳಉಡುಪುಗಳಿಂದ ತಯಾರಿಸಿರುವುದು ಈಗ ಬಯಲಾಗಿದೆ .
ಚೀನಾ ಇಂತಹ ಕೀಳು ಮಟ್ಟಕ್ಕೆ ಇಳಿದಿರುವುದು ಇದೇ ಮೊದಲಲ್ಲ ಎಂಬುದು ಗಮನಾರ್ಹ . ಚೀನಾ ಈ ಹಿಂದೆ ಸ್ಪೇನ್‌ಗೆ ಪರೀಕ್ಷಾ ಕಿಟ್‌ಗಳನ್ನು ಕಳುಹಿಸಿತ್ತು . ಅದು ಕೂಡ ನಿಷ್ಪ್ರಯೋಜಕವಾಗಿತ್ತು .
ಪಾಕಿಸ್ತಾನಕ್ಕೆ ಒಳಉಡುಪಿನಿಂದ ತಯಾರಿಸಿದ ಮಾಸ್ಕ್ ನೀಡಿದ ಚೀನಾ
- Advertisement -
- Advertisement -
- Advertisement -