- Advertisement -
- Advertisement -
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಸ್ನೇಹಿತೆಗೆ ಇಟಲಿಯಲ್ಲಿ ಕೊರೋನಾ ಸೋಂಕು ತಗುಲಿದ್ದು, ಅವರಿಗೆ ಕನ್ನಡಿಗ ಚಿಕಿತ್ಸೆ ನೀಡಿದ್ದಾರೆ.
ಕನ್ನಡಿಗ ಹೇಮಗೌಡ ಅವರು 10 ವರ್ಷಗಳಿಂದ ಪ್ರೊಫೆಷನಲ್ ನರ್ಸ್ ಆಗಿ ಇಟಲಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಟಲಿಯ ಟರಿಯನ್ ನಗರದ ರಿವೋಲಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಹೇಮಗೌಡ ಸೋನಿಯಾ ಗಾಂಧಿ ಸ್ನೇಹಿತೆಗೆ ಚಿಕಿತ್ಸೆ ನೀಡಿದ್ದು, ಹೇಮಗೌಡ ಭಾರತೀಯರೆಂಬುದನ್ನು ತಿಳಿದು ಸೋನಿಯಾ ಗಾಂಧಿ ಜೊತೆಗಿನ ಬಾಲ್ಯದ ನೆನಪು ಹಂಚಿಕೊಂಡಿದ್ದಾರೆ.
ಸೋನಿಯಾ ಗಾಂಧಿ ಅವರ ಊರು ವುರ್ಬಾಜಾನೊದಲ್ಲಿ ರಸ್ತೆಯೊಂದಕ್ಕೆ ರಾಜೀವ್ ಗಾಂಧಿ ಹೆಸರನ್ನು ಇಡಲಾಗಿದೆ. ಇದನ್ನು ತಿಳಿಸಿರುವ ಹೇಮಗೌಡ ಕೊನಾನಾ ಸೋಂಕಿತೆಗೆ ಚಿಕಿತ್ಸೆ ನೀಡಿದ ಸಂದರ್ಭದಲ್ಲಿ ಅವರು ನಾನು ಭಾರತೀಯ ಎಂಬುದನ್ನು ತಿಳಿದು ಖುಷಿಪಟ್ಟು ಸೋನಿಯಾಗಾಂಧಿ ಅವರ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
- Advertisement -
