Monday, April 29, 2024
HomeWorldಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ನಿಧನ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ನಿಧನ

spot_img
- Advertisement -
- Advertisement -

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಲೆಜೆಂಡರಿ ಸ್ಪಿನ್ನರ್ ಬಿಶನ್ ಸಿಂಗ್ ಬೇಡಿ ನಿಧನರಾಗಿದ್ದಾರೆ.

77 ವರ್ಷದ ಬಿಶನ್ ಸಿಂಗ್ ಬೇಡಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರು ಪತ್ನಿ ಅಂಜು, ಪುತ್ರ ಅಂಗದ್‌ ಮತ್ತು ಪುತ್ರಿ ನೇಹಾ ಅವರನ್ನು ಅಗಲಿದ್ದಾರೆ.

ಬಿಶನ್ ಸಿಂಗ್ ಬೇಡಿ 1967 ಮತ್ತು 1979ರ ನಡುವಿನ 12 ವರ್ಷಗಳ ವೃತ್ತಿಜೀವನದಲ್ಲಿ 67 ಟೆಸ್ಟ್‌ಗಳ ಪಂದ್ಯಗಳನ್ನು ಆಡಿದ್ದಾರೆ.

ಮೂಲತಃ ಅಮೃತಸರ ದವರಾದ ಅವರು ಭಾರತದ ಮೊದಲ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 1975ರಲ್ಲಿ ನಡೆದ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಈಸ್ಟ್ ಆಫ್ರಿಕಾ ಎದುರು ಅದ್ಭುತ ಬೌಲಿಂಗ್ ಮೂಲಕ ಒಡಿಐನಲ್ಲಿ ಭಾರತಕ್ಕೆ ಮೊತ್ತ ಮೊದಲ ಜಯ ತರುವಲ್ಲಿ ನೆರವಾಗಿದ್ದರು.

ಬಿಸಿಸಿಐ ಬಿಶನ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ಈ ಕುರಿತು ಬಿಸಿಸಿಐ ತನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

- Advertisement -
spot_img

Latest News

error: Content is protected !!