Wednesday, October 14, 2026
Homeಕರಾವಳಿದೈವಾರಾಧನೆ ನೋಡಲು ಫ್ರಾನ್ಸ್ ನಿಂದ ಕಡಬಕ್ಕೆ ಬಂದ ವಿದೇಶಿಗ

ದೈವಾರಾಧನೆ ನೋಡಲು ಫ್ರಾನ್ಸ್ ನಿಂದ ಕಡಬಕ್ಕೆ ಬಂದ ವಿದೇಶಿಗ

- Advertisement -
- Advertisement -

ಕಡಬ: ದೈವಾರಾಧನೆ ನೋಡಲು ಫ್ರಾನ್ಸ್ ನಿಂದ ಕಡಬಕ್ಕೆ ವಿದೇಶಿಗನೊಬ್ಬ ಬಂದ ಘಟನೆ ಕಡಬದಲ್ಲಿ ನಡೆದಿದೆ.

ಕಡಬ ತಾಲೂಕು ಕೊಯಿಲ ಗ್ರಾಮದ ಅತೂರು ಶ್ರೀ ಸದಾಶಿವ ದೇವಸ್ಥಾನಸ ಜಾತ್ರೋತ್ಸವಕ್ಕೆ  ಫ್ರಾನ್ಸ್ ದೇಶದ ಪ್ರಜೆ ಒಳಿವೇರ್ ಎಂಬುವವರು ತನ್ನ ಸ್ನೇಹಿತ ಕೊಯಿಲ ಗ್ರಾಮದ ಗುಂಡಿಜೆ ಯತೀಶ್ ಅವರ ಜೊತೆ ಅಗಮಿಸಿದ್ದಾರೆ.

ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಸೇರಿದಂತೆ ವಿವಿಧ ಸಮಿತಿಯ ಪದಾಧಿಕಾರಿಗಳು ಸ್ವಾಗತಿಸಿದರು.  ಅರ್ಚಕ ವಿಷ್ಣುಮೂರ್ತಿ ಬಡೆಕ್ಕಿಲ್ಲಾಯ ದೇವರ  ಪ್ರಸಾದ ನೀಡಿದರು. ಬಳಿಕ ದೇವಸ್ಥಾನದಲ್ಲಿ ನಡೆಯುವ ದುಗಲಾಯಿ ದೈವದ ನೇಮೋತ್ಸವದಲ್ಲಿ ಭಾಗವಹಿಸಿ ಖುಶಿ ವ್ಯಕ್ತಪಡಿಸಿದ್ರು.

ಈ ವೇಳೆ ಮಾತನಾಡಿದ ಅವರು  ತಾನು ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದು   ಸ್ನೇಹಿತರ ಸಂಪರ್ಕದಿಂದ ಈ ಗ್ರಾಮಕ್ಕೆ ಬಂದಿದ್ದೇನೆ.  ತುಳು ನಾಡಿನ ಸಂಸ್ಕೃತಿ, ಆಚರಣೆ ನೋಡಿ ಅಚ್ಚರಿಕೊಂಡಿದ್ದೇನೆ. ದೈವದ ನೋಮೋತ್ಸವ ನಿಜಕ್ಕೂ ವಿಶೇಷವಾಗಿದೆ ಎಂದರು.

- Advertisement -

Latest News

error: Content is protected !!