Saturday, June 6, 2026
Homeಕರಾವಳಿಉಡುಪಿಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಒಟ್ಟು ಆಸ್ತಿಯೆಷ್ಟು?

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಒಟ್ಟು ಆಸ್ತಿಯೆಷ್ಟು?

- Advertisement -
- Advertisement -

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರದ ಜೊತೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ. ಅಂದ್ಹಾಗೆ ಅವರು ಸಲ್ಲಿಸಿರುವ ಆಸ್ತಿ ವಿವರದ ಪ್ರಕಾರ  ಕೋಟ ಶ್ರೀನಿವಾಸ ಪೂಜಾರಿ ಅವರ ಒಟ್ಟು ಆಸ್ತಿ 3.5 ಕೋಟಿ.

ತಮ್ಮ ಅಫಿಡವಿಟ್ ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಪತ್ನಿ ಶಾಂತಾ ಮಕ್ಕಳಾದ ಸ್ವಾತಿ, ಶಶಿಧರ್ ಹಾಗೂ ಶ್ರುತಿ ಅವರ ಹೆಸರಿನಲ್ಲಿ ಇರುವ ಆಸ್ತಿಗಳ ವಿವರವನ್ನು ಸಲ್ಲಿಸಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರ ಕೈಯಲ್ಲಿ 90 ಸಾವಿರ ನಗದು ಹಣ ಇದ್ದು, ಹೆಂಡತಿ ಕೈಯಲ್ಲಿ 20 ಸಾವಿರ ಹಣ ಇದೆ. ಅಫಿಡವಿಟ್ ನಲ್ಲಿರುವ ಮಾಹಿತಿ ಪ್ರಕಾರ ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬ ಸ್ಥಿರಾಸ್ತಿ ಹಾಗೂ ಚರಾಸ್ತಿಯ ಒಟ್ಟು ಮೌಲ್ಯ 3,58,91,020 ರೂಪಾಯಿ ಆಗಿದೆ.  ಕೋಟ ಶ್ರೀನಿವಾಸ ಪೂಜಾರಿ ಅವರ ಕುಟುಂಬದ ಒಟ್ಟು 1,04,44,645 ರೂಪಾಯಿ ಸಾಲ ಹೊಂದಿದೆ.

- Advertisement -

Latest News

error: Content is protected !!