Friday, June 5, 2026
Homeತಾಜಾ ಸುದ್ದಿಮೊಸಳೆ ಬಾಲ ಹಿಡಿದೆಳೆದವನಿಗೆ ಬಲೆ ಬೀಸಿದ ಅರಣ್ಯಾಧಿಕಾರಿಗಳು!

ಮೊಸಳೆ ಬಾಲ ಹಿಡಿದೆಳೆದವನಿಗೆ ಬಲೆ ಬೀಸಿದ ಅರಣ್ಯಾಧಿಕಾರಿಗಳು!

- Advertisement -
- Advertisement -

ತಮಿಳುನಾಡು: ಕೆಲವು ದಿನಗಳ ಹಿಂದೆ ಇಲ್ಲಿನ ತಿರುಚಿ ಜಿಲ್ಲೆಯ ಮುಕ್ಕೊಂಬುವಿನಲ್ಲಿರುವ ಕಾವೇರಿ ನದಿಯಲ್ಲಿ ವ್ಯಕ್ತಿಯೊಬ್ಬ ಮೊಸಳೆ ಬಾಲವನ್ನು ಹಿಡಿದು ನೀರಿನಿಂದ ಎಳೆಯುತ್ತಿರುವ ವಿಡಿಯೋವೊಂದು ವೈರಲ್‌ ಆಗಿತ್ತು .ಆಗ ಈತನ ಧೈರ್ಯದ ಕುರಿತು ಜನ ಮಾತನಾಡಿದ್ದರು.

ಆದರೆ ಅರಣ್ಯಾಧಿಕಾರಿಗಳು ವಿಡಿಯೋ ನೋಡಿ ಎಚ್ಚೆತ್ತುಕೊಂಡಿದ್ದಾರೆ. ವೈರಲ್‌ ಆಗಿರುವ ವಿಡಿಯೋ ಯಾವ ದಿನ ದೃಶ್ಯ ಸೆರೆ ಹಿಡಿಯಲಾಗಿದೆ ಎಂಬುವ ಆಧಾರದ ಮೇಲೆ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬುದನ್ನು ತನಿಖೆ ನಡೆಸಲು ಅರಣ್ಯಾಧಿಕಾರಿಗಳು ವಿಶೇಷ ತಂಡವನ್ನು ರಚಿಸಿ, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!