Saturday, June 6, 2026
Homeಚಿಕ್ಕಮಗಳೂರುಕಾಡಾನೆ ಓಡಿಸಲು ಹೋಗಿ ನದಿಗೆ ಹಾರಿದ ಅರಣ್ಯ ಸಿಬ್ಬಂದಿ!

ಕಾಡಾನೆ ಓಡಿಸಲು ಹೋಗಿ ನದಿಗೆ ಹಾರಿದ ಅರಣ್ಯ ಸಿಬ್ಬಂದಿ!

- Advertisement -
- Advertisement -

ಚಿಕ್ಕಮಗಳೂರು: ಆನೆಯಿಂದ ತಪ್ಪಿಸಿಕೊಳ್ಳಲು ಹೋಗಿ ಅರಣ್ಯ ಇಲಾಖೆ ಸಿಬ್ಬಂದಿ ಇಬ್ಬರು ನದಿಗೆ ಜಿಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ.‌

ಕಳಸ ತಾಲೂಕಿನ ಕೊಂಡದಮನೆ ಗ್ರಾಮದಲ್ಲಿ ಘಟನೆ ನಡೆದಿದ್ದು, ನದಿಯಲ್ಲಿ ಮುಳುಗುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.ಕಾಡಾನೆ ಓಡಿಸಲು ಅರಣ್ಯ ಸಿಬ್ಬಂದಿ ಹೋಗಿದ್ದು ಓಡಿಸುವಾಗ ವಿರುದ್ಧ ದಿಕ್ಕಿನಲ್ಲಿ ಸಾಗಿದ ಕಾಡಾನೆ ಏಕಾಏಕಿ ಅರಣ್ಯ ಸಿಬ್ಬಂದಿಗಳ ಮೇಲೆ ದಾಳಿಗೆ ಯತ್ನಿಸಿದೆ.

ಆನೆಯಿಂದ ತಪ್ಪಿಸಿಕೊಳ್ಳಲು ಸಿಬ್ಬಂದಿ ಭದ್ರಾ ನದಿಗೆ ಹಾರಿದ್ದು ,ಆಳವಿದ್ದ ಸ್ಥಳದಲ್ಲಿ ಮುಳುಗುತ್ತಿದ್ದ ಅರಣ್ಯ ಸಿಬ್ಬಂದಿಯನ್ನು ಗಮನಿಸಿ ಸ್ಥಳೀಯರು ರಕ್ಷಿಸಿ ನದಿಯಿಂದ ಮೇಲೆತ್ತಿದ್ದಾರೆ.ನದಿಗೆ ಹಾರಿದ್ದ ಇಬ್ಬರಿಗೂ ಕಳಸ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

- Advertisement -

Latest News

error: Content is protected !!