Tuesday, July 14, 2026
Homeತಾಜಾ ಸುದ್ದಿಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆ: ಸೌದೆಗಾಗಿ ಮರಗಳನ್ನು ಕಡಿಯದಂತೆ ಎಚ್ಚರಿಕೆ ವಹಿಸಲು ಅರಣ್ಯ ಸಚಿವ...

ಗ್ಯಾಸ್ ಸಿಲಿಂಡರ್ ಪೂರೈಕೆ ವ್ಯತ್ಯಯ ಹಿನ್ನೆಲೆ: ಸೌದೆಗಾಗಿ ಮರಗಳನ್ನು ಕಡಿಯದಂತೆ ಎಚ್ಚರಿಕೆ ವಹಿಸಲು ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ

- Advertisement -
- Advertisement -

ಬೆಂಗಳೂರು: ಗ್ಯಾಸ್ ಸಿಲಿಂಡರ್ ‌ಪೂರೈಕೆ ವ್ಯತ್ಯಯವಾಗಿರುವ ಕಾರಣದಿಂದಾಗಿ ಸೌದೆಗಾಗಿ ಮರಗಳು ಕಡಿಯಲ್ಪಡುವ ಸಾಧ್ಯತೆ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.

ಕಾಡು, ಕಾಡಿನಂಚಿನಲ್ಲಿ ಹಾಗೂ ಸರ್ಕಾರಿ ಭೂಮಿಯಲ್ಲಿ ಮರಗಳನ್ನು ಕಡಿಯದಂತೆ ಜಾಗ್ರತೆ ವಹಿಸುವಂತೆ ಅರಣ್ಯ ಪಡೆ ಮುಖ್ಯಸ್ಥರಿಗೆ ಸಚಿವ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಅಡುಗೆ ಅನಿಲ ಪೂರೈಕೆಯಲ್ಲೂ ವ್ಯತ್ಯಯ ಆಗುತ್ತಿರುವ ಕಾರಣ ಸೌದೆಗಾಗಿ ಅಕ್ರಮ ಮರ ಕಡಿಯುವ ಸಾಧ್ಯತೆ ಇರುವುದರಿಂದ ಗಸ್ತು ಮತ್ತು ನಿಗಾ ಹೆಚ್ಚಿಸಲು ಸಚಿವರು ಆದೇಶಿಸಿದ್ದಾರೆ.

ಒಂದು ವೇಳೆ, ಅರಣ್ಯ ಮತ್ತು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಮರ‌ ಕಡಿದರೆ ಸಂಬಂಧಿತ ವಲಯದ ಅಧಿಕಾರಿ ಹಾಗೂ ಸಿಬ್ಬಂದಿಯನ್ನೇ ಹೊಣೆ ಮಾಡಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

- Advertisement -

Latest News

error: Content is protected !!