Tuesday, July 14, 2026
Homeತಾಜಾ ಸುದ್ದಿಚಾರಣಿಗರ ಸುರಕ್ಷತೆಗಾಗಿ ಜಾರಿಗೆ ಬರಲಿದೆ ಟ್ರ್ಯಾಕಿಂಗ್ ಆ್ಯಪ್ ಮತ್ತು ವಿಮೆ; ಯೋಜನೆ ರೂಪಿಸಲು ಮುಂದಾದ ಅರಣ್ಯ...

ಚಾರಣಿಗರ ಸುರಕ್ಷತೆಗಾಗಿ ಜಾರಿಗೆ ಬರಲಿದೆ ಟ್ರ್ಯಾಕಿಂಗ್ ಆ್ಯಪ್ ಮತ್ತು ವಿಮೆ; ಯೋಜನೆ ರೂಪಿಸಲು ಮುಂದಾದ ಅರಣ್ಯ ಇಲಾಖೆ

- Advertisement -
- Advertisement -

ಬೆಂಗಳೂರು: ರಾಜ್ಯದ ಅರಣ್ಯ ಮತ್ತು ಬೆಟ್ಟಗಳಲ್ಲಿ ಪದೇ ಪದೇ ಚಾರಣಿಗರು ಅಪಘಾತಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಚಾರಣಿಗರ ಸುರಕ್ಷತೆಗಾಗಿ ಟ್ರ್ಯಾಕಿಂಗ್ ಆಪ್ ಮತ್ತು ವಿಮೆ ಜಾರಿಗೆ ರಾಜ್ಯ ಅರಣ್ಯ ಇಲಾಖೆ ಮುಂದಾಗಿದೆ.

ಈ ಸಂಬಂಧವಾಗಿ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಚಾರಣಕ್ಕೆ ಪ್ರಮಾಣಿತ ಮಾನದಂಡ ರೂಪಿಸುವಂತೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಸೂಚನೆ ನೀಡಿದ್ದಾರೆ.

ರಾಜ್ಯದ ಗಿರಿ ಶಿಖರಗಳ ಚಾರಣಕ್ಕೆ ಎಸ್ಓಪಿ ರಚನೆಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಅರಣ್ಯ ಇಲಾಖೆ ಈಗಾಗಲೇ ಅಭಿವೃದ್ಧಿಪಡಿಸಿರುವ ಇ-ಗಸ್ತು, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಬಳಕೆ ಮಾಡುವ ಎಂ. ಸ್ಟ್ರೈಪ್ಸ್ ನಂತಹ ಆಪ್ ರೀತಿಯಲ್ಲೇ ಚಾರಣದ ಅವಧಿಯಲ್ಲಿ ತಾತ್ಕಾಲಿಕವಾಗಿ ಚಾರಣಿಗರ ಮೊಬೈಲ್ ನಲ್ಲಿ ಟ್ರ್ಯಾಕಿಂಗ್ ಆ್ಯಪ್ ಅಳವಡಿಕೆಗೆ ಯೋಜನೆ ರೂಪಿಸಲು ಮುಂದಾಗಿದೆ.

ಅಲ್ಲದೇ, ಚಾರಣಿಗರಿಗೆ ಗುಂಪು ವಿಮೆ ಮಾಡಿಸುವಂತೆ ಮತ್ತು ಚಾರಣಿಗರಿಗೆ ಮಾರ್ಗದರ್ಶನ ಮಾಡುವ ನೇಚರ್ ಗೈಡ್ ಗಳಿಗೆ ಕಡ್ಡಾಯವಾಗಿ ವೈರ್ ಲೆಸ್ ಸೆಟ್ ನೀಡುವಂತೆಯೂ ಅರಣ್ಯ ಸಚಿವ ಈಶ್ವರ ಖಂಡ್ರೆ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

- Advertisement -

Latest News

error: Content is protected !!