Sunday, June 7, 2026
Homeಕರಾವಳಿಕಾರ್ಕಳದಲ್ಲಿ ಅವಧಿ ಮೀರಿದ ಆಹಾರ ಸೇವಿಸಿದ ಹಸುಗಳು: ಸಾವು 25 ಕ್ಕೂ ಹೆಚ್ಚು ದನಗಳು...

ಕಾರ್ಕಳದಲ್ಲಿ ಅವಧಿ ಮೀರಿದ ಆಹಾರ ಸೇವಿಸಿದ ಹಸುಗಳು: ಸಾವು 25 ಕ್ಕೂ ಹೆಚ್ಚು ದನಗಳು ಅಸ್ವಸ್ಥ

- Advertisement -
- Advertisement -

ಕಾರ್ಕಳ: ಹೊಳೆ ಬದಿ ಎಸೆದ ಅವಧಿ ಮೀರಿದ ಆಹಾರವನ್ನು  ತಿಂದು 5 ಹಸುಗಳು ಮೃತಪಟ್ಟ ಘಟನೆ ಕಾರ್ಕಳದಲ್ಲಿ ನಡೆದಿದೆ.

ಇಲ್ಲಿನ ಜೋಹಲ್ಬೆಟ್ಟು ನದಿಯ ಹತ್ತಿರ ಸುಮಾರು 25 ಗೋಣಿ ಕಡಲೆ ಹಿಟ್ಟನ್ನು ಬಿಸಾಕಿ ಹೋಗಿದ್ದು, ಇದನ್ನು ತಿಂದ ಐದು ಹಸುಗಳು ಸಾವನ್ನಪ್ಪಿವೆ.  ಸುಮಾರು 25-30 ಹಸುಗಳು ಅಸ್ವಸ್ಥಗೊಂಡಿವೆ.

ಪಾಪಿಗಳ ಕೃತ್ಯಕ್ಕೆ ಮೂಕ ಪ್ರಾಣಿಗಳು ಬಲಿಯಾಗಿವೆ. ಘಟನೆಗೆ ಸಂಬಂಧಿಸಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ತಕ್ಷಣವೇ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ವಹಿಸಬೇಕು ಎಂದು ಸ್ಥಳೀಯರು, ಹಿಂದೂ ಸಂಘಟನೆಯವರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!