Saturday, May 18, 2024
Homeಕರಾವಳಿಉಪ್ಪಿನಂಗಡಿಯ ನೆಕ್ಕಿಲಾಡಿ ಬಳಿ ಮಗುಚಿ ಬಿದ್ದ ಡೀಸೆಲ್ ಟ್ಯಾಂಕರ್: ಡೀಸೆಲ್ ತುಂಬಿಕೊಳ್ಳಲು ಮುಗಿ ಬಿದ್ದ ಸ್ಥಳೀಯರು

ಉಪ್ಪಿನಂಗಡಿಯ ನೆಕ್ಕಿಲಾಡಿ ಬಳಿ ಮಗುಚಿ ಬಿದ್ದ ಡೀಸೆಲ್ ಟ್ಯಾಂಕರ್: ಡೀಸೆಲ್ ತುಂಬಿಕೊಳ್ಳಲು ಮುಗಿ ಬಿದ್ದ ಸ್ಥಳೀಯರು

spot_img
- Advertisement -
- Advertisement -

ಉಪ್ಪಿನಂಗಡಿ: ಡಿಸೇಲ್ ತುಂಬಿದ್ದ ಟ್ಯಾಂಕರ್ ವೊಂದು ಮುಗುಚಿ ಬಿದ್ದ  ಘಟನೆ ರಾಷ್ಟ್ರೀಯ ಹೆದ್ದಾರಿ 75 ರ ಉಪ್ಪಿನಂಗಡಿ ಸಮೀಪ ನೆಕ್ಕಿಲಾಡಿ ಎಂಬಲ್ಲಿ ನಡೆದಿದೆ.

ಈ ಅಪಘಾತದಲ್ಲಿ ಟ್ಯಾಂಕರ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರಿನಿಂದ ತೆರಳುತ್ತಿದ್ದ ಟ್ಯಾಂಕರ್ ಬೊಳ್ಳಾರ ಬಳಿ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದ್ದು, ಬಿದ್ದ ಪರಿಣಾಮ ಟ್ಯಾಂಕರ್ ನಿಂದ ಡಿಸೇಲ್ ಸೋರಿಕೆಯಾಗಿದೆ.

ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು ಮತ್ತು ವಾಹನ ಚಾಲಕರು ಸೋರಿಕೆಯಾಗುತ್ತಿದ್ದ ಡಿಸೇಲ್ ನ್ನು ತುಂಬಿಸಲು ಮುಗಿ ಬಿದ್ರು. ಇದರಿಂದ ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿತ್ತು. ಸ್ಥಳಕ್ಕೆ ಉಪ್ಪಿನಂಗಡಿ ಪೋಲೀಸರು ಸ್ಥಳಕ್ಕೆ ಭೇಟಿ ಜನರನ್ನು ಚದುರಿಸಿದ್ದಾರೆ

- Advertisement -
spot_img

Latest News

error: Content is protected !!