ಬೆಳ್ತಂಗಡಿ: ಯಕ್ಷಗಾನ ಕರಾವಳಿ ಭಾಗದ ಮಣ್ಣಿನ ಸಾಂಪ್ರದಾಯಿಕ ಕಲೆ ಕೊರೊನಾ ಮಹಾ ಮಾರಿಯಿಂದ ಯಕ್ಷಗಾನ ಕಲೆಯನ್ನೇ ಜೀವನಾಧಾರವನ್ನಾಗಿಸಿದ ಕಲಾವಿದರಿಗೆ ದಿಕ್ಕು ತೋಚದ ಸ್ಥಿತಿ ಉಂಟಾಗಿದ್ದು ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ ತಾಲೂಕಿನ 10 ಯಕ್ಷಗಾನ ಕಲಾವಿದರನ್ನು ಗುರುತಿಸಿ ಅಗತ್ಯ ವಸ್ತುಗಳ ಕಿಟ್ ಹಾಗೂ ಗೌರವ ಸಮರ್ಪಿಸಲಾಯಿತು.
ಅಂತರರಾಷ್ಟ್ರೀಯ ನೃತ್ಯ ದಿನದಂದು ರೋಟರಿ ಕ್ಲಬ್ ಬೆಳ್ತಂಗಡಿ ಇದರ ವತಿಯಿಂದ ತಾಲೂಕಿನ ಹತ್ತು ಮಂದಿ ಯಕ್ಷಗಾನ ಕಲಾವಿದರನ್ನು ಗುರುತಿಸಿ ಒಟ್ಟು ರೂಪಾಯಿ ಹತ್ತು ಸಾವಿರ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಿತರಿಸಿದರು.
ಆಹಾರದ ಕಿಟ್ ಗಳ ಪ್ರಾಯೋಜಕತ್ವವನ್ನು ಬೆಂಗಳೂರಿನ ಶ್ರೀಮತಿ ಮತ್ತು ಶ್ರೀ ಅನೀಶ್, ರೋ ಕೆ.ಪಿ ಪ್ರಸಾದ್ ,ಬಿ.ಕೆ ಗೋಪಾಲ್ ರಾವ್ ಹಾಗೂ ಬಿ.ಕೆ ವಿಘ್ನೇಶ್ ಕುಮಾರ್ ಕಿಲ್ಲೂರು ವಹಿಸಿದ್ದರು. ಗೌರವಾರ್ಪಣೆಯ ಪ್ರಾಯೋಜನೆಯನ್ನು ಯೋಗೀಶ್ ಭಿಡೆ ಹಾಗೂ ಅನೆಟ್ ಅನುಷಾ ಮಚ್ಚಿಮಲೆ ನೀಡಿದ್ದರು.
ಈ ಪ್ರಶಂಸನೀಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದರಾದ ಉಜಿರೆ ಅಶೋಕ್ ಭಟ್, ರೋಟರಿ ಸದಸ್ಯರಾದ ರೋ. ಕೆ. ಪಿ ಪ್ರಸಾದ್, ರೋ ಪ್ರಕಾಶ್ ಪ್ರಭು, ರೋ. ಶ್ರೀಧರ್ ಕೆ.ವಿ, ರೋ ಶಶಿಕಾಂತ್ ಡೋಂಗ್ರೆ, ರೋ. ಬಿ. ಕೆ ಧನಂಜಯ್ ರಾವ್, ಶ್ರೀಮತಿ ರಾಜಶ್ರೀ, ಶ್ರೀಮತಿ ಗಾಯತ್ರಿ ಶ್ರೀಧರ್, ವಿಷ್ಣುಮೂರ್ತಿ ಭಟ್ ಹಾಗೂ ಯಕ್ಷ ಭಾರತಿಯ ಪ್ರತಿನಿಧಿಯಾಗಿ ಸಂಚಾಲಕ ಮಹೇಶ್ ಕನ್ಯಾಡಿ ಭಾಗವಹಿಸಿದ್ದರು.