ಸುಳ್ಯ: ತಾಲೂಕಿನ ಐವರ್ನಾಡು ಗ್ರಾಮದ ಕೊಯಿಲ ದಲಿತ ಕೊಲೊನಿಯಲ್ಲಿ ಸಮರ್ಪಕ ಮನೆ ಇಲ್ಲದೆ ಬಡ ದಲಿತ ಕುಟುಂಬವೊಂದು ನರಕಯಾತನೆ ಅನುಭವಿಸುತ್ತಿದೆ.
ಕುಟುಂಬದ ಯಜಮಾನ ವಿನೋದು ಅವರ ಸಂಸಾರದಲ್ಲಿ ವಿನೋದವೆ ಕಾಣುತ್ತಿಲ್ಲ. ಜಾಗವಿದ್ದರೂ ಕಿತ್ತು ತಿನ್ನುವ ಬಡತನದಿಂದ ಮಳೆ ಗಾಳಿಯಿಂದ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಒಂದು ಸುಸಜ್ಜಿತ ಮನೆ ನಿರ್ಮಿಸಲು ಸಾದ್ಯವಾಗಿಲ್ಲ.
ಹಲವಾರು ಬಾರಿ ಮನೆ ನಿರ್ಮಿಸಲು ಗ್ರಾಮ ಪಂಚಾಯತ್ ಗೆ ಅರ್ಜಿ ಸಲ್ಲಿಸಿದರು ಮನೆ ಮಂಜೂರುಗೊಂಡಿಲ್ಲ. ಇವರ ಕುಟುಂಬವಲ್ಲದೆ ಪರಿಸರದಲ್ಲಿ ಇನ್ನು ಅನೆಕ ನಿರ್ಗತರಿದ್ದಾರೆ. ಈ ಬಾಗದ ಜನರ ಮೂಲಭೂತ ಸಮಸ್ಯೆಗೆ ಜನಪ್ರತಿನಿದಿಗಳು ಗಮನ ಹರಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ .
ಶಾಸಕರ ಚುನಾವಣೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ದಲಿತ ಸಮುದಾಯಕ್ಕೆ ಮೀಸಲಾಗಿದ್ದರೂ ಆರು ಬಾರಿ ಶಾಸಕರಾಗಿರುವ ಎಸ್ ಅಂಗಾರ ದಲಿತ ಸಮುದಾಯದವರಾಗಿದ್ದರೂ ಇನ್ನು ತಾಲೂಕಿನ ಅನೇಕ ಕಡೆ ದಲಿತ ಕುಟುಂಬಗಳು ಕಣ್ಣೀರಿನಲ್ಲೇ ಜೀವನ ಸವೆಸುತ್ತಿರುವುದು ವಿಪರ್ಯಾಸವೇ ಸರಿ.