- Advertisement -
- Advertisement -
ಉಪ್ಪಿನಂಗಡಿ: ಕೊರೋನಾ ವೈರಸ್ ಹರಡದಂತೆ ತಡೆಯಲು ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ-ಉಪ್ಪಿನಂಗಡಿ ಖಾಸಗಿ ಬಸ್ ನೌಕರರ ಸಂಘದ ವತಿಯಿಂದ ಖಾಸಗಿ ಬಸ್ ನೌಕರರಲ್ಲಿ ಕಡುಬಡತನದ ಅವರನ್ನು ಆರಿಸಿ 70 ಜನರಿಗೆ ಅಕ್ಕಿ ಹಾಗೂ ದಿನ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಈ ಬಸ್ ನೌಕರರ ಸಂಘಟನೆಯ ಯಶಸ್ವಿ ಜನಮನ ಗೆದ್ದ ಬಸ್ ನೌಕರರ ಸಂಘದ ಅಧ್ಯಕ್ಷರಾದ ಸಿದ್ದಿಕ್ ಕೆಂಪಿ ಇವರ ಮುಂದಾಳತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಪದ್ಮ ಪ್ರಸಾದ್ ಜೈನ್, ಪ್ರಧಾನ ಕಾರ್ಯದರ್ಶಿಯಾದ ಮತ್ತು ರಾಜಕೆಸರಿಯ ಸಂಸ್ಥಾಪಕರಾದ ದೀಪಕ್ ಜಿ, ಕೋಶಧಿಕಾರಿ ಇಲಿಯಾಸ್ ಕರಾಯ ಮತ್ತು ಸದಸ್ಯರಾದ ಚಭಕ್ಕ, ಚಿದಾನಂದ ಸಾಲಿಯಾನ್, ಮನ್ಸೂರು, ಶರತ್ ಶರೀಫ್ ಇವರುಗಳು ಸೇರಿ ನೌಕರರ ಮನೆ ಮನೆಗೆ ತಲುಪಿಸಿದ್ದರು.
- Advertisement -