ಕಲ್ಲಡ್ಕ: ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಪೇಟೆಯಲ್ಲಿ ಬೀದಿಬದಿಯಲ್ಲಿ ಮಾರಾಟ ಜೋರಾಗಿ ನಡೆಯುತ್ತಿತ್ತು.ಬೀದಿ ಬದಿಯಲ್ಲಿ ವ್ಯಾಪಾರ ಮಾಡುವ ವ್ಯಾಪಾರಿಯ ನಿರ್ಲಕ್ಷ್ಯದಿಂದ ಸೊಂಕು ಹರಡುವ ಲಕ್ಷಣಗಳು ಹೆಚ್ಚು ಇರುವುದರಿಂದ ಬಂಟ್ವಾಳ ನಗರ ಠಾಣಾ ಎಸ್. ಐ.ಅವಿನಾಶ್ ನೇತ್ರತ್ವದ ಪೋಲೀಸ್ ತಂಡ ಅವರನ್ನು ತೆರವುಗೊಳಿಸಿದರು.
ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ರಾಜ್ಯದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಲ್ಲಿಯೂ ಹೆಚ್ಚಿನ ಮುಂಜಾಗ್ರತೆ ಅಗತ್ಯವಾಗಿದೆ. ಹಾಗಾಗಿ ಹೆಚ್ಚಿನ ಜಾಗೃತಿ ಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವ ಬೀದಿ ಬದಿಯ ಜೊತೆ ಜನಸೇರುವ ಯಾವುದೇ ವ್ಯಾಪಾರ ಕ್ಕೆ ಅವಕಾಶ ಮಾಡಿಕೊಡಬಾರದು ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಅಧಿಕಾರಿಗಳ ಮಾತಿಗೆ ಬೆಲೆ ಕೊಡದೆ ತಿರುಗಾಟ ನಡೆಸಿದರೆ , ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವಹಿವಾಟು ನಡೆಸಿದರೆ ದ.ಕ.ಜಿಲ್ಲೆಯೂ ಸೀಲ್ ಡೌನ್ ಅಗುವುದರಲ್ಲಿ ಸಂಶಯವಿಲ್ಲ. ಏನೇ ಇರಲಿ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರಕಾರದ ಅದೇಶವನ್ನು ನೀವು ನಾವು ಪಾಲಿಸಲೇಬೇಕಾಗಿದೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಗುಂಪು ಗುಂಪು ಸೇರುವ ಬೀದಿಬದಿ ವ್ಯಾಪಾರಿಗಳಿಗೆ ಅವಕಾಶವನ್ನು ಬಂಟ್ವಾಳ ತಾಲೂಕಿನ ಅಧಿಕಾರಿಗಳು ನೀಡಲೇ ಬಾರದು ಎಂಬುದು ಸಾರ್ವಜನಿಕ ಒತ್ತಾಯವಾಗಿದೆ.
ಕಲ್ಲಡ್ಕ: ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದ ಬಂಟ್ವಾಳ ಎಸ್. ಐ.ಅವಿನಾಶ್
- Advertisement -
- Advertisement -
- Advertisement -