Saturday, August 29, 2026
Homeಕರಾವಳಿಸುಳ್ಯ: ಕೊಯನಾಡು ಕಿಂಡಿ ಅಣೆಕಟ್ಟಿನಲ್ಲಿ ಮತ್ತೆ ಪ್ರವಾಹ: 30ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು  

ಸುಳ್ಯ: ಕೊಯನಾಡು ಕಿಂಡಿ ಅಣೆಕಟ್ಟಿನಲ್ಲಿ ಮತ್ತೆ ಪ್ರವಾಹ: 30ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ ನೀರು  

- Advertisement -
- Advertisement -

ಸುಳ್ಯ: ಕೊಯನಾಡು ಕಿಂಡಿ ಅಣೆಕಟ್ಟಿನಲ್ಲಿ ನಿನ್ನೆ ಸುರಿದ ಭಾರೀ ಮಳೆಗೆ ಪ್ರವಾಹ ಉಂಟಾಗಿ30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಬೆಳಗಿನ ಜಾವ ಐದು ಗಂಟೆ ವೇಳೆಗೆ ಮನೆಗಳಿಗೆ ನೀರು ನುಗ್ಗಿದೆ.

ಇನ್ನು ಪ್ರವಾಹ ನೀರಿನಲ್ಲಿ ಸಿಲುಕಿಕೊಂಡಿದ್ದ ವಿಶೇಷ ಚೇತನ ಚೇತನ್ ಅವರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ.ಹಂದಿ ಕೋಳಿ ಸೇರಿದಂತೆ ಸಾಕು ಪ್ರಾಣಿಗಳು ಪ್ರವಾಹ ಪಾಲಾಗಿದ್ದು, ಜೀವಭಯದಲ್ಲೇ ಕೂತಿದ್ದಾರೆ ಸ್ಥಳೀಯರು.

ಇನ್ನು ಕೊಯನಾಡು ಸೇತುವೆ ಬಳಿ ನೂರಾರು ಮರ, ರೆಂಬೆ ಕೊಂಬೆಗಳು ಸಿಲುಕಿಕೊಂಡಿವೆ. ನೀರು ನುಗ್ಗಿರುವ ಮನೆಗಳಲ್ಲಿದ್ದವರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಮಡಿಕೇರಿ ತಹಶೀಲ್ದಾರ್ ಮಹೇಶ್ ಕೊಯನಾಡಿನಲ್ಲೇ ಮೊಕ್ಕಾಂ ಹೂಡಿದ್ದಾರೆ.

- Advertisement -

Latest News

error: Content is protected !!