Wednesday, June 3, 2026
Homeಕರಾವಳಿಕಿನ್ನಿಗೋಳಿ: ಮಹಿಳೆಗೆ ಕಾರು ಡಿಕ್ಕಿ: ಭೀಕರ ಅಪಘಾತದಲ್ಲಿ ಮಹಿಳೆ ಸಹಿತ ಐವರಿಗೆ ಗಾಯ

ಕಿನ್ನಿಗೋಳಿ: ಮಹಿಳೆಗೆ ಕಾರು ಡಿಕ್ಕಿ: ಭೀಕರ ಅಪಘಾತದಲ್ಲಿ ಮಹಿಳೆ ಸಹಿತ ಐವರಿಗೆ ಗಾಯ

- Advertisement -
- Advertisement -

ಮುಲ್ಕಿ: ಚಾಲಕನ ನಿಯಂತ್ರಣ ತಪ್ಪಿದ ಕಾರು ಮಹಿಳೆಗೆ ಡಿಕ್ಕಿಯಾಗಿ, ಮಹಿಳೆ ಸಹಿತ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಕಿನ್ನಿಗೋಳಿ ಮೂಡಬಿದ್ರೆ ರಾಜ್ಯ ಹೆದ್ದಾರಿಯ ಎಂಸಿಸಿ ಬ್ಯಾಂಕ್ ಬಳಿ ನಡೆದಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ.

ಪಕ್ಷಿಕೆರೆ ಕೆಮ್ರಾಲ್ ನಿವಾಸಿ ಜಯಂತಿ ಶೆಟ್ಟಿ (50) ಗಾಯಗೊಂಡ ಮಹಿಳೆ.  ಉಳಿದಂತೆ ಕಾರಿನಲ್ಲಿದ್ದ ಚಾಲಕ ತೋಡಾರ್ ಗಳಾದ ನಿವಾಸಿ ಚಾಲಕ ಕೆ ಹೆಚ್ ಅಬ್ದುಲ್ ಖಾದರ್ (65), ರಿದಾ (16), ರಶ್ಮಿ (18), ಕೌಸರ್ (46), ಎಂದು ಗುರುತಿಸಲಾಗಿದ್ದು ಕಿನ್ನಿಗೊಳಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಸುರತ್ಕಲ್ ಕೃಷ್ಣಾಪುರದಿಂದ ಮೂಡಬಿದ್ರೆಯ ತೋಡಾರ್ ಕಡೆಗೆ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ಭೀಕರ ದೃಶ್ಯ ಸ್ಥಳೀಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!