Thursday, June 4, 2026
Homeತಾಜಾ ಸುದ್ದಿಅಟಲ್‌ ಸುರಂಗದಲ್ಲಿ ನಾಮ ಫಲಕಕ್ಕೆ ಕಿತ್ತಾಟ- ಕಾಂಗ್ರೆಸ್‌ ನಾಯಕಿಯ ನಾಮ ಫಲಕ ಕಿತ್ತು ಹಾಕಿದ್ದೇಕೆ?

ಅಟಲ್‌ ಸುರಂಗದಲ್ಲಿ ನಾಮ ಫಲಕಕ್ಕೆ ಕಿತ್ತಾಟ- ಕಾಂಗ್ರೆಸ್‌ ನಾಯಕಿಯ ನಾಮ ಫಲಕ ಕಿತ್ತು ಹಾಕಿದ್ದೇಕೆ?

- Advertisement -
- Advertisement -

ಛಂಡಿಗಡ: ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಹಿಮಾಚಲ ಪ್ರದೇಶದ ರೋಹ್ಟಂಗ್‌ನಲ್ಲಿರುವ ಅಟಲ್‌ ಸುರಂಗವನ್ನು ಲೋಕಾರ್ಪಣೆಗೊಳಿಸಿದ್ದರು.ಆದರೆ ಈಗ ರೋಹ್ಟಂಗ್‌ನ ಅಟಲ್‌ ಸುರಂಗದಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಅವರ ಹೆಸರಿದ್ದ ಫಲಕವನ್ನು ಕಿತ್ತು ಹಾಕಲಾಗಿದ್ದು, ಇದರಿಂದ ಸಿಡಿಮಿಡಿಗೊಂಡಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್‌ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದೆ.

ಅಕ್ಟೋಬರ್‌ 3ರ ಅಟಲ್‌ ಟನಲ್‌ ಉದ್ಘಾಟನೆಗೂ ಮುನ್ನ ಸೋನಿಯಾ ಗಾಂಧಿ ಹೆಸರಿದ್ದ ಫಲಕವನ್ನು ಕಿತ್ತು ಹಾಕಲಾಗಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಯುಪಿಎ ಅಧ್ಯಕ್ಷರಾಗಿದ್ದ ಸೋನಿಯಾ ಗಾಂಧಿ ಅವರು 2010ರ ಜೂನ್‌ 28ರಂದು ಈ ಅಟಲ್‌ ಸುರಂಗಕ್ಕೆ ಅಡಿಗಲ್ಲು ಹಾಕಿದ್ದರು. ಈ ವೇಳೆ ಶಂಕು ಸ್ಥಾಪನೆಯ ದಿನ ಸೋನಿಯಾ ಗಾಂಧಿ ಸೇರಿದಂತೆ ಯುಪಿಎ ಸರ್ಕಾರದ ಪ್ರಮುಖ ನಾಯಕರ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ನಾಯಕರ ಹೆಸರಿನ ಫಲಕವನ್ನು ಹಾಕಲಾಗಿತ್ತು.

- Advertisement -

Latest News

error: Content is protected !!