Monday, May 13, 2024
Homeಮನರಂಜನೆಮೊದಲ ಬಾರಿಗೆ ಮಗನ ವಿಡಿಯೋ ಶೇರ್ ಮಾಡಿದ ರಾಕಿಂಗ್ ಸ್ಟಾರ್ ಯಶ್..

ಮೊದಲ ಬಾರಿಗೆ ಮಗನ ವಿಡಿಯೋ ಶೇರ್ ಮಾಡಿದ ರಾಕಿಂಗ್ ಸ್ಟಾರ್ ಯಶ್..

spot_img
- Advertisement -
- Advertisement -

ಬೆಂಗಳೂರು : ಮಗಳು ಹುಟ್ಟಿದಾಗಿನಿಂದ ಆಕೆಯ ಫೋಟೋ ಹಾಗೂ ವಿಡಿಯೋಗಳನ್ನು ರಾಕಿಂಗ್ ಸ್ಟಾರ್ ಯಶ್ ಆಗಲೀ ಇಲ್ಲಾ ರಾಧಿಕ್ ಪಂಡಿತ್ ಅವರೇ ಆಗಲಿ ಶೇರ್ ಮಾಡುತ್ತಲೇ ಬಂದಿದ್ದಾರೆ. ಮಗನ ಫೋಟೋವನ್ನು ಕೆಲವು ತಿಂಗಳುಗಳ ಕಾಲ ಎಲ್ಲೂ ಬಹಿರಂಗ ಮಾಡದ ದಂಪತಿ ಇತ್ತೀಚೆಗಷ್ಟೇ ಮುದ್ದಾದ ಫೋಟೋದ ಮೂಲಕ ಮಗನ ಮುಖವನ್ನು ರಿವೀಲ್ ಮಾಡಿದ್ದರು. ಆದರೆ ಎಲ್ಲೂ ವಿಡಿಯೋ ಶೇರ್ ಮಾಡಿಕೊಂಡಿರಲಿಲ್ಲ.

ಆದ್ರೀಗ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಆತನ ಆಟಿಕೆಯ ಕಾರಿನಲ್ಲಿ ಕೂತು ಮಗ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಹಾಡೊಂದಕ್ಕೆ ಈ ಪುಟಾಣಿ ಸ್ಟಾರ್ ಸಿಕ್ಕಾಪಟ್ಟೆ ಕುಣಿತಿದ್ದಾನೆ. ಇನ್ನು ಪಕ್ಕದಲ್ಲೇ ಇರೋ ನಟ ಯಶ್ ಮಗನನ್ನು “ಕಾಮನ್ ಕೆಂಚ ಡ್ಯಾನ್ಸ್, ಸೂಪರ್ ಮಗನೇ, ಗುಡ್ ಕಂದ ಗುಡ್ , ಸೂಪರ್ ನೀನು” ಅಂತಾ ಹುರಿದುಂಬಿಸುತ್ತಿದ್ದಾರೆ. ಅಲ್ಲದೇ ವಿಡಿಯೋಗೆ ಸುಂದರವಾದ ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ. “ನಿಲ್ಲೋದಕ್ಕೆ ಕಷ್ಟವಾಗುತ್ತದೆ, ಆದರೂ ಮ್ಯೂಸಿಕ್ ಕೇಳುತ್ತಿದ್ದಂತೆ ನಮ್ಮ ಲಿಟಲ್ ಮ್ಯಾನ್ , ಪಾರ್ಟಿ ಅನಿಮಲ್ ಆಗಿ ಬದಲಾಗುತ್ತಾನೆ” ಅಂತಾ ಬರೆದಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

Can barely stand, but once the music is on our little man turns into a party animal !?PS: Do ignore the over enthusiastic dad in the baground ?

Posted by Rocking Star Yash Fans Club on Tuesday, 14 July 2020

- Advertisement -
spot_img

Latest News

error: Content is protected !!