Friday, June 5, 2026
Homeತಾಜಾ ಸುದ್ದಿ6 ದಿನಗಳ ಹಿಂದೆ ಬೋಟಿನಿಂದ ನಾಪತ್ತೆಯಾಗಿದ್ದ ನಟಿ ಇಂದು ಶವವಾಗಿ ಪತ್ತೆ

6 ದಿನಗಳ ಹಿಂದೆ ಬೋಟಿನಿಂದ ನಾಪತ್ತೆಯಾಗಿದ್ದ ನಟಿ ಇಂದು ಶವವಾಗಿ ಪತ್ತೆ

- Advertisement -
- Advertisement -

ಲಾಸ್ ಏಂಜಲೀಸ್: ಆರು ದಿನಗಳ ಹಿಂದೆ ಕ್ಯಾಲಿಫೋರ್ನಿಯಾದ ಕಣಿವೆಯಲ್ಲಿ ಮಗನೊಂದಿಗೆ ಬೋಟಿನಲ್ಲಿ ಹೋಗಿದ್ದಾಗ ನಾಪತ್ತೆಯಾಗಿದ್ದ ನಟಿ ಹಾಲಿವುಡ್‍ನ ನಟಿ ನಯಾ ರಿವೇರಾರ ಮೃತದೇಹ ಇಂದು ಸಿಕ್ಕಿದೆ. ಇದು ಆತ್ಮಹತ್ಯೆ ಅಲ್ಲ ಎಂದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಿಂದ ತಿಳಿದು ಬಂದಿದ್ದು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.

ಘಟನೆಯ ಕುರಿತು:
33ರ ಹರೆಯದ ರಿವೇರಾ ಲಾಸ್‌ ಏಂಜಲೀಸ್ ಸುತ್ತಾಡುವುದಕ್ಕಾಗಿ ಬೋಟ್‌ ಒಂದನ್ನು ಒಂದು ಗಂಟೆಗಳ ಅವಧಿಗೆ ಬಾಡಿಗೆಗೆ ಪಡೆದುಕೊಂಡಿದ್ದರು. ಆಕೆಯ ಜತೆ ಕಿರಿಯ ಮಗನೂ ಬೋಟ್‌ನಲ್ಲಿದ್ದನು. ಬುಧವಾರ ಮಧ್ಯಾಹ್ನ ರಿವೇರಾ ಅವರ ಬೋಟ್ ನಾಪತ್ತೆಯಾಗಿತ್ತು. ರಕ್ಷಣಾ ಬೋಟ್‌ಗಳ ಸಹಾಯದಿಂದ ಹುಡುಕಾಟ ನಡೆಸಿದಾಗ ಮುಳುಗಿರುವ ಬೋಟ್ ಮತ್ತು ಆಕೆಯ ಮಗ ಪತ್ತೆಯಾಗಿದ್ದರು.

ಯಾರೀಕೆ ನಯಾ ರಿವೇರಾ?
ರಿವೇರಾ ಕ್ಯಾಲಿಫೋರ್ನಿಯಾದ ವೆಲೆನ್ಸಿಯಾದಲ್ಲಿ ಜನಿಸಿದರು. ಬಾಲ್ಯದಲ್ಲಿ ಇರುವಾಗಲೇ ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ನಾಲ್ಕನೇ ವಯಸ್ಸಿನಲ್ಲಿ ‘ಸಿಬಿಎಸ್ ಸಿಟ್ಕಾಮ್​​ ದಿ ರಾಯಲ್ ಫ್ಯಾಮಿಲಿ’ ಮೂಲಕ ಹಾಲಿವುಡ್​​ಗೆ ಪಾದಾರ್ಪಣೆ ಮಾಡಿದರು. ಅಷ್ಟೇ ಅಲ್ಲ ತಮ್ಮ 10ನೇ ವಯಸ್ಸಿಗೆ ‘ಫ್ರೆಷ್​ ಪ್ರಿನ್ಸ್ ಆಫ್ ಬೆಲ್ ಏರ್’, ‘ಫ್ಯಾಮಿಲಿ ಮ್ಯಾಟರ್ಸ್’ ಹಾಗೂ ‘ಬೇವಾಚ್’ ಎಂಬ ಕಾರ್ಯಕ್ರಮಗಳಲ್ಲಿ ಅವರು ಕಾಣಿಸಿಕೊಂಡಿದ್ದರು.

- Advertisement -

Latest News

error: Content is protected !!