Thursday, June 25, 2026
Homeಕರಾವಳಿಉಜಿರೆ: ರಾಜಕೀಯ ವಿಷಯದಲ್ಲಿ ಹಳ್ಳಿಮನೆ ಬಾರ್ & ರೆಸ್ಟೋರೆಂಟ್ ನ ಮಾಲಕರಿಗೂ, ಗ್ರಾಹಕರಿಗೂ ಮಾರಾಮಾರಿ, ಮೂವರು...

ಉಜಿರೆ: ರಾಜಕೀಯ ವಿಷಯದಲ್ಲಿ ಹಳ್ಳಿಮನೆ ಬಾರ್ & ರೆಸ್ಟೋರೆಂಟ್ ನ ಮಾಲಕರಿಗೂ, ಗ್ರಾಹಕರಿಗೂ ಮಾರಾಮಾರಿ, ಮೂವರು ಆಸ್ಪತ್ರೆಗೆ ದಾಖಲು

- Advertisement -
- Advertisement -

ಉಜಿರೆ: ಪೇಟೆಯ ‘ಹಳ್ಳಿ ಮನೆ’ ಬಾರ್ & ರೆಸ್ಟೋರೆಂಟ್ ನಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ತಮ್ಮಷ್ಟಕ್ಕೆ ತಮ್ಮ ಪಕ್ಷದ ಬಗ್ಗೆ ಮತ್ತು ಸ್ಥಳೀಯ ಶಾಸಕರ ಬಗ್ಗೆ ಮಾತನಾಡುತ್ತಿರುವುದನ್ನು ಸಹಿಸಲಾಗದ ಬಾರ್ ನ ಮಾಲೀಕ ಯುವಕರನ್ನು ಓಮಿನಿ ಕಾರಿನಲ್ಲಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.

ಮೂವರು ಬಿಜೆಪಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿರುವ ಕಾರ್ಯಕರ್ತರು ‘ಹಳ್ಳಿ ಮನೆ’ ಬಾರ್ & ರೆಸ್ಟೋರೆಂಟ್ ಗೆ ಭೇಟಿ ನೀಡಿ ಊಟ ಮಾಡುತ್ತಿದ್ದರು. ಈ ಸಮಯದಲ್ಲಿ ಇವರು ಸ್ಥಳೀಯ ಶಾಸಕ ಹರೀಶ್ ಪೂಂಜ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತಾನಾಡುತ್ತಿದ್ದಾಗ ಅಲ್ಲಿಗೆ ಎಂಟ್ರಿಯಾದ ಬಾರ್ ಮಾಲಕ ಪ್ರವೀಣ್ ಶಾಸಕರ ಕಾರ್ಯವೈಖರಿಯನ್ನು ಕೀಳಾಗಿ ಮಾತನಾಡಿ ಹೊರಗಿನಿಂದ ಜನ ಕರೆಸಿ ಕಾರ್ಯಕರ್ತರಲ್ಲಿ ತಮ್ಮ ಓಮಿನಿ ಕಾರಿನಲ್ಲಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ಘಟನೆಯಲ್ಲಿ ಹಲ್ಲೆಗೊಂಡಿರುವ ಮೂವರು ಬಿಜೆಪಿ ಕಾರ್ಯಕರ್ತರು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡಯುತ್ತಿದ್ದಾರೆ.
ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಬಾರ್ ಮಾಲಕರ ಪತ್ನಿಯೂ ಆಸ್ಪತ್ರೆಗೆ ದಾಖಲು:

ಇತ್ತಂಡಗಳ ಮಾರಾಮಾರಿಯಲ್ಲಿ ಬಾರ್ ನ ಮಾಲಕರ ಪತ್ನಿ ಕ್ಯಾಶ್ ಕೌಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರಿಗೂ ಹಲ್ಲೆಯಾಗಿದೆ ಎಂದು ತಿಳಿದು ಬಂದಿದ್ದು , ಇಂದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

- Advertisement -

Latest News

error: Content is protected !!