Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲೆಯಲ್ಲಿ ಬಜೆಟ್ ಘೋಷಿತ ಮೊದಲ ಸರ್ಕಾರಿ ಗೋ ಶಾಲೆ ಉದ್ಘಾಟನೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಜೆಟ್ ಘೋಷಿತ ಮೊದಲ ಸರ್ಕಾರಿ ಗೋ ಶಾಲೆ ಉದ್ಘಾಟನೆ

- Advertisement -
- Advertisement -

ಚಿಕ್ಕಮಗಳೂರು: ಬಜೆಟ್ ಘೋಷಿತ ರಾಜ್ಯದ ಮೊದಲ ಸರ್ಕಾರಿ ಗೋ ಶಾಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಉದ್ಘಾಟನೆಗೊಂಡಿದೆ.

ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ಗೋಶಾಲೆಯಲ್ಲಿ ಗೋವುಗಳಿಗೆ ಪೂಜೆ ಮಾಡಿ, ಮೇವು ನೀಡಿ ಪಶು ಸಂಗೋಪನಾ‌ ಸಚಿವ ಪ್ರಭು ಚೌಹಾಣ್ ಉದ್ಘಾಟಿಸಿದ್ದಾರೆ.ಉದ್ಘಾಟನೆ ಬಳಿಕ ಗೋ ಶಾಲೆಯ ಕೇಂದ್ರವನ್ನು ಸಚಿವ ಪ್ರಭು ಚೌವ್ಹಾಣ್ ವೀಕ್ಷಣೆ ಮಾಡಿದರು.

ಬಜೆಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿ ಜಿಲ್ಲೆಗೊಂದು ಸರ್ಕಾರಿ ಗೋ ಶಾಲೆ ಘೋಷಣೆ ಮಾಡಿದ್ದರು. ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೊದಲ ಗೋ ಶಾಲೆ ಆರಂಭವಾಗಿದ್ದು, ಎಮ್ಮೆದೊಡ್ಡಿ ಸರ್ಕಾರಿ ಗೋ ಶಾಲೆಯಲ್ಲಿ 300 ಗೋವುಗಳಿಗೆ ಆಶ್ರಯ ನೀಡುವ ಸೌಲಭ್ಯ ಕಲ್ಪಿಸಲಾಗಿದೆ.10 ಎಕರೆ ಪ್ರದೇಶದಲ್ಲಿ ವಿಶಾಲವಾದ ಗೋಶಾಲೆ ಸ್ಥಾಪನೆ ಮಾಡಲಾಗಿದೆ.

- Advertisement -

Latest News

error: Content is protected !!