Thursday, June 4, 2026
Homeತಾಜಾ ಸುದ್ದಿಮನುಷ್ಯನ‌ ನೀಚತನಕ್ಕೆ‌ ಸಾಕ್ಷಿಯಾದ ತಮಿಳುನಾಡು; ರೆಸಾರ್ಟ್ ಬಳಿ ಬಂದ ಆನೆಯನ್ನು‌‌ ಬೆಂಕಿ‌ ಹಚ್ಚಿ‌ ಕೊಂದ ಪಾಪಿಗಳು,...

ಮನುಷ್ಯನ‌ ನೀಚತನಕ್ಕೆ‌ ಸಾಕ್ಷಿಯಾದ ತಮಿಳುನಾಡು; ರೆಸಾರ್ಟ್ ಬಳಿ ಬಂದ ಆನೆಯನ್ನು‌‌ ಬೆಂಕಿ‌ ಹಚ್ಚಿ‌ ಕೊಂದ ಪಾಪಿಗಳು, ವಿಡಿಯೋ ವೈರಲ್

- Advertisement -
- Advertisement -

ತಮಿಳುನಾಡು: ಕೆಲವು ತಿಂಗಳುಗಳ‌ ಹಿಂದೆ ಕೇರಳದಲ್ಲಿ ‌ಗರ್ಭಿಣಿ ಆನೆಯನ್ನು‌ ಪಟಾಕಿ‌ ಸಿಡಿಸಿ‌ ಹೀನಾಯವಾಗಿ ಕೊಂದ ಘಟನೆ ನಿಮಗೆಲ್ಲಾ ನೆನಪಿರಬಹುದು. ಇಂತಹದ್ದೇ ಹೀನ ಕೃತ್ಯವೊಂದು‌ ತಮಿಳುನಾಡಿನಲ್ಲಿ‌ ನಡೆದಿದೆ..

ತಮಿಳುನಾಡಿನ ನೀಲಗಿರಿಯಲ್ಲಿ ಆನೆಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ. 50 ವರ್ಷದ ಆನೆಯೊಂದು ರೆಸಾರ್ಟ್‌ ಹತ್ತಿರ ಬಂದಿತ್ತು. ಆ ಆನೆಯನ್ನು ಓಡಿಸಲು ಅದರ ಮೇಲೆ ಬೆಂಕಿ ಎಸೆದು ಕೊಂದೇ ಬಿಟ್ಟಿದ್ದಾರೆ ಪಾಪಿಗಳು. ಇದೀಗ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನ ಬಂಧಿಸಿದ್ದಾರೆ. ಮತ್ತೊಬ್ಬನಿಗಾಗಿ ಹುಡುಕಾಟ ನಡೆಸ್ತಿದ್ದಾರೆ.
ಪಾಪಿಗಳ ಹೀನ ಕೃತ್ಯದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು‌ ಭಾರೀ‌ ಆಕ್ರೋಶ ವ್ಯಕ್ತವಾಗುತ್ತಿದೆ..

- Advertisement -

Latest News

error: Content is protected !!