Saturday, June 13, 2026
Homeಕರಾವಳಿಉಜಿರೆಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ: ಬೆಂಗಳೂರು ಮೂಲದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- 'ಅಮನ್' ಬಂಧನ

ಉಜಿರೆಯಲ್ಲಿ ಮತ್ತೊಂದು ಲವ್ ಜಿಹಾದ್ ಪ್ರಕರಣ: ಬೆಂಗಳೂರು ಮೂಲದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ- ‘ಅಮನ್’ ಬಂಧನ

- Advertisement -
- Advertisement -

ಮಂಗಳೂರು: ಬೆಳ್ತಂಗಡಿ ತಾಲೂಕಿನ ಖಾಸಗಿ ವಿದ್ಯಾಸಂಸ್ಥೆಯೊಂದರಲ್ಲಿ ದೂರದ ಬೆಂಗಳೂರಿನಿಂದ ಉಜಿರೆಯ ಪಿಜಿ ಯೊಂದರಲ್ಲಿ ವಾಸವಾಗಿದ್ದುಕೊಂಡು 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಅಪ್ರಾಪ್ತ ಬಾಲಕಿಯ ಸ್ನೇಹ ಬೆಳೆಸಿ ಲೈಂಗಿಕ ಕಿರುಕುಳ ನೀಡಿ ಲವ್ ಜಿಹಾದ್ ಬಲೆಗೆ ಬೀಳಿಸಿಕೊಳ್ಳಲು ವ್ಯಕ್ತಿಯೊಬ್ಬ ಯತ್ನಿಸುತಿದ್ದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.

ಉಜಿರೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿರುವ ಉಜಿರೆಯ TB ಕ್ರಾಸ್ ನಿವಾಸಿಯೊಬ್ಬರ ಮಗ ಮಹಮ್ಮದ್ ಅಮನ್ ವಿರುದ್ಧ ಬೆಂಗಳೂರಿನ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಮ್ಮದ್ ಅಮನ್ ತನ್ನ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿರುವ ಸ್ನೇಹಿತೆಯ ಮುಖಾಂತರ ಆಕೆಯ ಪಿಜಿಯಲ್ಲಿ ವಾಸವಿರುವ ಸಂತ್ರಸ್ತ ವಿದ್ಯಾರ್ಥಿನಿಯ ನಂಬರ್ ಪಡೆದು, ಸ್ನೇಹ ಬೆಳೆಸಿ ಮಾತಿನಲ್ಲಿ ಮರುಳು ಮಾಡಿ ಬಲೆಗೆ ಬೀಳಿಸಿಕೊಂಡಿದ್ದಾನೆ.

ಅಪ್ರಾಪ್ತ ಬಾಲಕಿಯನ್ನು ಬೆದರಿಸಿ ಆಕೆಯ ಬೆತ್ತಲೆ ಫೋಟೋ ಪಡೆದು ನೀನು ನನ್ನ ಜೊತೆ ಬರಬೇಕು, ಇಲ್ಲವಾದರೆ ಫೋಟೊ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಈತ ಆಕೆಗೆ ದಿನನಿತ್ಯ ವೀಡಿಯೊ ಕಾಲ್ ಮಾಡಿ ತೊಂದರೆ ಕೊಡುತ್ತಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ವಿದ್ಯಾರ್ಥಿನಿಯ ಪೋಷಕರು ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದೀಗ ಆರೋಪಿಯನ್ನು ಬೆಳ್ತಂಗಡಿಯ ಪೋಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿಜಿ ಮತ್ತವರ ತಂಡ ಪತ್ತೆ ಹಚ್ಚಿ ಬೆಂಗಳೂರು ಪೋಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!