Thursday, May 2, 2024
Homeತಾಜಾ ಸುದ್ದಿಚಂಡೀಗಢದ ವೈದ್ಯರಿಂದ ಐತಿಹಾಸಿಕ ಶಸ್ತ್ರಚಿಕಿತ್ಸೆ-ಮಗುವಿನ ಮೂಗಿನ ಮೂಲಕ ಬ್ರೇನ್ ಟ್ಯೂಮರ್ ಹೊರತೆಗೆದ ವೈದ್ಯರು!..

ಚಂಡೀಗಢದ ವೈದ್ಯರಿಂದ ಐತಿಹಾಸಿಕ ಶಸ್ತ್ರಚಿಕಿತ್ಸೆ-ಮಗುವಿನ ಮೂಗಿನ ಮೂಲಕ ಬ್ರೇನ್ ಟ್ಯೂಮರ್ ಹೊರತೆಗೆದ ವೈದ್ಯರು!..

spot_img
- Advertisement -
- Advertisement -

ಚಂಡೀಗಢ:ಇಲ್ಲಿನ ಹದಿನಾರು ತಿಂಗಳ ಹೆಣ್ಣುಮಗುವಿಗೆ ಬ್ರೇನ್ ಟ್ಯೂಮರ್ ಸಮಸ್ಫಯೇ ಉಂಟಾಗಿದ್ದು ಮೂಗಿನ ಮೂಲಕ ಬ್ರೇನ್ ಟ್ಯೂಮರ್ ತೆಗೆಯುವ ಐತಿಹಾಸಿಕ ಶಸ್ತ್ರಚಿಕಿತ್ಸೆಯನ್ನು ಚಂಡೀಗಢದ ವೈದ್ಯರುನಡೆಸಿದ್ದರು . ನ್ಯೂರೋ ಎಂಡೋಸ್ಕೋಪಿ ಎಂಬ ಅಸಾಧಾರಣ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಚಿಕಿತ್ಸೆ ಫಲಪದವಾಗಿದೆ.

ಈ ಚಿಕಿತ್ಸೆಗೆ ಒಳಗಾದ ಪ್ರಪಂಚದ ಅತಿಚಿಕ್ಕ ವಯಸ್ಸಿನ ಮಗುವಾದ ‘ಅಮಾಯ್ರ’ ವೈದ್ಯಕೀಯ ಆರೈಕೆಯಲ್ಲಿ ಸಧ್ಯ ಚೇತರಿಸಿಕೊಳ್ಳುತ್ತಿದ್ದಾಳೆ.ನ್ಯೂರೋಸರ್ಜರಿ ವಿಭಾಗದ ಡಾ.ಎಸ್.ಎಸ್. ದಂಡಪಾಣಿ ಮತ್ತು ಡಾ. ಸುಶಾಂತ್ ಹಾಗೂ ಇಎನ್​ಟಿ ವಿಭಾಗದ ಡಾ. ರಿಜುನೀತಾ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು. ಚಂಡೀಗಢದ ಪೋಸ್ಟ್​ ಗ್ರಾಜುಯೇಟ್ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆಯಂಡ್ ರಿಸರ್ಚ್​ನಲ್ಲಿ ವೈದ್ಯರ ತಂಡ ಈ ಸಾಹಸ ನಡೆಸಿ ಯಶಸ್ವಿಯಾಗಿದೆ. ಶಸ್ತ್ರಚಿಕಿತ್ಸೆಯಲ್ಲಿ 3 ಸೆಂಟಿಮೀಟರ್ ಗಾತ್ರದ ದೊಡ್ಡ ಕ್ಯಾನ್ಸರ್ ಗೆಡ್ಡೆಯನ್ನು ಹೊರತೆಗೆಯಲಾಗಿದ್ದು ಮಗು ಆರೋಗ್ಯವಾಗಿದೆ.

- Advertisement -
spot_img

Latest News

error: Content is protected !!