Thursday, June 4, 2026
Homeತಾಜಾ ಸುದ್ದಿಗಾಢ ನಿದ್ರೆಯಲ್ಲಿದ್ದಾಗ ಮನೆಗೆ ಬೆಂಕಿ: 5 ಮಂದಿ ಮಲಗಿದ್ದಲ್ಲೇ ಭಸ್ಮ

ಗಾಢ ನಿದ್ರೆಯಲ್ಲಿದ್ದಾಗ ಮನೆಗೆ ಬೆಂಕಿ: 5 ಮಂದಿ ಮಲಗಿದ್ದಲ್ಲೇ ಭಸ್ಮ

- Advertisement -
- Advertisement -

ಬಿಹಾರ: ಮನೆಗೆ ಬೆಂಕಿಬಿದ್ದು ನಾಲ್ವರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ಐದು ಮಂದಿ ಬೆಂಕಿಗೆ ಆಹುತಿಯಾಗಿರುವ ಘಟನೆ ಬಿಹಾರದ ಕಿಶನ್‍ಜಂಗ್‍ನಲ್ಲಿ ನಡೆದಿದೆ. ನೂರ್ ಆಲಂ, ಆತನ ಇಬ್ಬರು ಪುತ್ರಿಯರಾದ ತೌಫಾ, ಬಬ್ಲಿ, ಪುತ್ರರಾದ ರಹಮತ್ ಮತ್ತು ಶಾಹಿದ್ ಬೆಂಕಿಗೆ ಆಹುತಿಯಾದ ನತದೃಷ್ಟರು. ಬೆಂಕಿ ಅವಘಡದಲ್ಲಿ ನೂರ್ ಆಲಂ ಪತ್ನಿಗೆ ಸುಟ್ಟ ಗಾಯಗಳಾಗಿದ್ದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಿಶನ್‍ಜಂಗ್‍ನ ಸಲಾಮ್ ಕಾಲೋನಿಯಲ್ಲಿ ಮನೆಯವರು ನಿದ್ರಿಸುತ್ತಿದ್ದಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಈ ದುರಂತ ಸಂಭವಿಸಿದೆ ಎಂದ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಶಹನವಾಜ್ ಆಹ್ಮದ್ ನೀಯಾಜಿ ತಿಳಿಸಿದ್ದಾರೆ. ಮನೆಗೆ ಬೆಂಕಿ ಬಿದ್ದ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಆಗ್ನಿ ಶಾಮಕ ದಳದ ವಾಹನಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದವು.

ಘಟನೆಯಲ್ಲಿ ಸುಟ್ಟು ಕರಕಲಾದ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ಅನ್ವರ್ ಜಾವೇದ್ ಅನ್ಸಾರಿ ತಿಳಿಸಿದ್ದಾರೆ.

- Advertisement -

Latest News

error: Content is protected !!