Thursday, June 4, 2026
Homeಕರಾವಳಿಸುಳ್ಯ: ಕಳಂಜದಲ್ಲಿ‌ ಬೆಂಕಿ ಅವಘಡಕ್ಕೆ ಮಹಿಳೆ ಬಲಿ

ಸುಳ್ಯ: ಕಳಂಜದಲ್ಲಿ‌ ಬೆಂಕಿ ಅವಘಡಕ್ಕೆ ಮಹಿಳೆ ಬಲಿ

- Advertisement -
- Advertisement -

ಸುಳ್ಯ: ಅಡುಗೆ ಕೋಣೆಯಲ್ಲಿ ಬೆಂಕಿ‌ ಅನಾಹುತ ಸಂಭವಿಸಿ ಮಹಿಳೆ ಸಾವನ್ನಪ್ಪಿರುವ ಘಟನೆ‌ ಕಳಂಜ‌ ಗ್ರಾಮದ ಬಾಳೆಗುಡ್ಡೆ ಎಂಬಲ್ಲಿ‌ ನಡೆದಿದೆ.

ಕುಸುಮಾ (41) ಮೃತ ದುರ್ದೈವಿ. ಜುಲೈ 20 ರಂದು ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಬೆಂಕಿ ತಗುಲಿ ಕುಸುಮ ಗಂಭೀರ ಗಾಯಗೊಂಡಿದ್ದರು. ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು‌ ಇಂದು ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!