- Advertisement -
![]()
- Advertisement -
ಬೆಳ್ತಂಗಡಿ : ಶಾಂತಿನಗರದಲ್ಲಿ ಇಬ್ಬರ ಮೇಲೆ ಹಲ್ಲೆ ಪ್ರಕರಣ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆಯುತ್ತಿದೆ. ಹಲ್ಲೆಗೊಳಗಾದ ವ್ಯಕ್ತಿಯ ವಿರುದ್ಧ ಇದೀಗ ಪೋಕ್ಸೋ ಪ್ರಕರಣ ದಾಖಲಾಗಿದೆ.
ಲೈಂಗಿಕ ಕಿರುಕುಳಕ್ಕೆ ಒಳಗಾದ ಬಾಲಕಿಯ ತಾಯಿ ನಾರಾಯಣ ನಾಯ್ಕ್ ಎಂಬಾತನ ವಿರುದ್ಧ ದೂರು ನೀಡಿದ್ದಾರೆ.
ನಾರಾಯಣ ನಾಯ್ಕ ಎಂಬಾತ ದಿನಾಂಕ: 08.07.2022 ರಂದು ಸಂಜೆ ಸುಮಾರು 4.00 ಗಂಟೆಯ ಸಮಯಕ್ಕೆ ಗೆಣಸು ನೀಡುವುದಾಗಿ 6 ವರ್ಷದ ನನ್ನ ಮಗಳನ್ನು ಮನೆಗೆ ಕರೆದಿದ್ದಾನೆ. ಬಾಲಕಿ ಮನೆಗೆ ಹೋದಾಗ ನಾರಾಯಣ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.
ಸುಮಾರು 15 ನಿಮಿಷದ ನಂತರ ಮಗು ಅಳುತ್ತಾ ಬಂದಿದ್ದಾಳೆ. ವಿಚಾರಿಸಿದಾಗ ನಡೆದ ಘಟನೆಯನ್ನು ವಿವರಿಸಿದ್ದಾಳೆ. ಘಟನೆ ನಡೆದ ದಿನ ಮಗುವಿನ ಭವಿಷ್ಯದ ದೃಷ್ಟಿಯಿಂದ ದೂರು ನೀಡಿರಲಿಲ್ಲ. ಇಂದು ದೂರು ನೀಡುತ್ತಿದ್ದೇವೆ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ.
- Advertisement -


