Friday, June 5, 2026
Homeಕರಾವಳಿಮಂಗಳೂರು: ಮೊಬೈಲ್ ಅಂಗಡಿಗೆ ನುಗ್ಗಿ ಯುವಕರ ಗುಂಪಿನಿಂದ ದಾಂಧಲೆ

ಮಂಗಳೂರು: ಮೊಬೈಲ್ ಅಂಗಡಿಗೆ ನುಗ್ಗಿ ಯುವಕರ ಗುಂಪಿನಿಂದ ದಾಂಧಲೆ

- Advertisement -
- Advertisement -

ಮಂಗಳೂರು: ಮೊಬೈಲ್ ಅಂಗಡಿಗೆ ನುಗ್ಗಿ  ಯುವಕರ ಗುಂಪೊಂದು ದಾಂಧಲೆ ಮಾಡಿದ ಘಟನೆ ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಬಳಿಯ ದುಬೈ ಮಾರ್ಕೆಟ್ ನಲ್ಲಿ ನಡೆದಿದೆ.

ಗ್ರಾಹಕನೋರ್ವ ಪವರ್ ಬ್ಯಾಂಕ್ ರಿಪೇರಿಗೆಂದು ಅಂಗಡಿಗೆ ಬಂದಿದ್ದ. ಈ ವೇಳೆ ಅಂಗಡಿ ಮಾಲೀಕ ನಾವು ಮೊಬೈಲ್ ಹೊರತು ಬೇರೆ ಯಾವುದನ್ನೂ ರಿಪೇರಿ ಮಾಡಲ್ಲ ಎಂದಿದ್ದಾನೆ.ಆಗ ಮಾತಿಗೆ ಮಾತು ಬೆಳೆದು ಗ್ರಾಹಕ ಅಂಗಡಿ ಮಾಲೀಕನಿಗೆ ಹಲ್ಲೆ ನಡೆಸಿದ್ದಾನೆ.ಬಳಿಕ ಅಲ್ಲಿಂದ ತೆರಳಿ ತನ್ನ ಗೆಳೆಯರ ಗುಂಪನ್ನ ಕರೆ ತಂದು ಮತ್ತೆ ಹಲ್ಲೆ ಮಾಡಿದ್ದಾನೆ. ಇನ್ನು ಹಲ್ಲೆ ನಡೆಸಿದ ದೃಶ್ಯ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ನಿನ್ನೆ ರಾತ್ರಿ ಹತ್ತು ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಸುಮಾರು ಆರು ಜನರ ತಂಡದಿಂದ ಕೃತ್ಯ ನಡೆದಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ಬಂದರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!