- Advertisement -
- Advertisement -
ಮಂಗಳೂರು ; ಯುವಕರ ತಂಡವೊಂದರ ಮಧ್ಯೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಶರೀಫ್, ಅಬ್ದುಲ್ ರಹಿಮಾನ್, ಚೇತನ್ ಹಾಗೂ ವಿಕ್ರಮ್ ಬಂಧಿತರು.
ಆರೋಪಿಗಳು ಆಗಸ್ಟ್ 30ರಂದು ಬೆಳಗ್ಗೆ 11.15ಕ್ಕೆ ನೀರುಮಾರ್ಗ ಅಂಚೆ ಕಚೇರಿಯ ಬಳಿಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕರ ಶಾಂತಿ ಭಂಗ ತಂದಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
- Advertisement -