Friday, April 19, 2024
Homeತಾಜಾ ಸುದ್ದಿಟಿಸಿಎಸ್ ಸಂಸ್ಥಾಪಕ, ಭಾರತದ ಸಾಫ್ಟ್‌ವೇರ್ ಉದ್ಯಮದ ಪಿತಾಮಹ ಫಕೀರ್ ಚಂದ್ ಕೊಹ್ಲಿ ನಿಧನ

ಟಿಸಿಎಸ್ ಸಂಸ್ಥಾಪಕ, ಭಾರತದ ಸಾಫ್ಟ್‌ವೇರ್ ಉದ್ಯಮದ ಪಿತಾಮಹ ಫಕೀರ್ ಚಂದ್ ಕೊಹ್ಲಿ ನಿಧನ

spot_img
- Advertisement -
- Advertisement -

ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌(ಟಿಸಿಎಸ್)ನ ಸ್ಥಾಪಕ ಮತ್ತು ಭಾರತದ ಐಟಿ ಉದ್ಯಮದ ಪಿತಾಮಹ ಎಂದೇ ಕರೆಯಲ್ಪಡುವ ಫಕೀರ್ ಚಂದ್ ಕೊಹ್ಲಿ ಅವರು ಗುರುವಾರ ನಿಧನರಾಗಿದ್ದಾರೆ.

ಎಫ್‌ಸಿ ಕೊಹ್ಲಿಯವ್ರು ಭಾರತದ ಅತೀ ದೊಡ್ಡ ಸಾಫ್ಟ್‌ವೇರ್ ಕನ್ಸಲ್‌ಟೆನ್ಸಿಯಾದ ಟಾಟಾ ಕನ್ಸಲ್‌ಟೆನ್ಸಿ ಸರ್ವೀಸ್(TCS) ಸಂಸ್ಥಾಪಕ ಹಾಗೂ ಮೊದಲ ಸಿಇಒ ಆಗಿದ್ದರು.

ಎಫ್‌ಸಿ ಕೊಹ್ಲಿ ಅವರು 1924ರ ಮಾರ್ಚ್ 19 ರಂದು ಪಾಕಿಸ್ತಾನದ ಪೇಶಾವರ್ ನಲ್ಲಿ ಜನಿಸಿದರು. ಪೇಶಾವರದಲ್ಲಿಯೇ ಶಾಲಾ ಶಿಕ್ಷಣವನ್ನು ಮಾಡಿದ ಅವರು, ಲಾಹೋರ್‌ನ ಪಂಜಾಬ್ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಬಿಎಸ್ಸಿ ಪದವಿ ಪಡೆದರು. ನಂತರ 1948 ರಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಮುಗಿಸಿದರು. ಕೆನಡಿಯನ್ ಜನರಲ್ ಎಲೆಕ್ಟ್ರಿಕ್ ಕಂಪನಿಯಲ್ಲಿ ಒಂದು ವರ್ಷ ಕೆಲಸ ಮಾಡಿದರು ಮತ್ತು 1950 ರಲ್ಲಿ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಎಸ್ ಮಾಡಿದರು. 1951ರಲ್ಲಿ ಟಾಟಾ ಎಲೆಕ್ಟ್ರಿಕ್ ಕಂಪನಿ ಸೇರಿಕೊಂಡರು.

96 ವರ್ಷದ ಎಫ್ ಸಿ ಕೊಹ್ಲಿ ಅವರು ಇಂದು ನಿಧನರಾಗಿದ್ದು, ನಾಸ್ಕಾಮ್ ಟ್ವೀಟ್ ಮೂಲಕ ಅವರಿಗೆ ಸಂತಾಪ ಸೂಚಿಸಿದೆ.

- Advertisement -
spot_img

Latest News

error: Content is protected !!