Saturday, June 6, 2026
Homeಕರಾವಳಿಪುತ್ತೂರು: ಪಿಎಫ್‍ ಹಣಕ್ಕಾಗಿ ಮಾಜಿ ನೌಕರ ಹಾಗೂ ಬೈಕ್ ಶೋ ರೂಮ್ ಮಾಲಕನ ನಡುವೆ ನೂಕಾಟ-...

ಪುತ್ತೂರು: ಪಿಎಫ್‍ ಹಣಕ್ಕಾಗಿ ಮಾಜಿ ನೌಕರ ಹಾಗೂ ಬೈಕ್ ಶೋ ರೂಮ್ ಮಾಲಕನ ನಡುವೆ ನೂಕಾಟ- ತಲ್ಲಾಟ

- Advertisement -
- Advertisement -

ಪುತ್ತೂರು: ದ್ವಿಚಕ್ರ ವಾಹನ ಶೋ ರೂಮ್ ನಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ನೌಕರ ಮತ್ತು ಸಂಸ್ಥೆಯ ಮಾಲೀಕನ ಮಗನ ನಡುವೆ ಪಿಎಫ್ ಹಣಕ್ಕಾಗಿ ನಡೆದ ಮಾತಿನ ಚಕಮಕಿಯಲ್ಲಿ ನೂಕಾಟ-ತಲ್ಲಾಟದಲ್ಲಿ ಇಬ್ಬರು ಪರಸ್ಪರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ನಡೆದಿದೆ.

ಪುತ್ತೂರಿನ ಪ್ರತಿಷ್ಟಿತ ವಾಹನ ಶೋ ರೂಮ್ ವೊಂದಕ್ಕೆ ಮಾಜಿ ನೌಕರರಾದ ರಂಜನ್ (26) ಎಂಬುವರು ಇಂದು ಅವರ ಸಹೋದರನೊಂದಿಗೆ ಆಗಮಿಸಿ ಅವರ ಪಿಎಫ್ ವಿಚಾರಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಹೆಚ್ ಆರ್ ಗಿರೀಶ್ ಅವರನ್ನು ಕೇಳಿದಾಗ ಸರಿಯಾದ ಉತ್ತರ ನೀಡದೆ ಉಡಾಫೆ ಉತ್ತರ ನೀಡಿದ್ದ ಹಿನ್ನಲೆಯಲ್ಲಿ , ಕ್ಯಾಬೀನ್ನಲ್ಲಿದ್ದ ಮಾಲಕ ಕೃಷ್ಣ ಕಿಶೋರ್ ಎಂಬುವರ ಜೊತೆ ಮಾತಿಗೆ ಮಾತು ಬೆಳೆದಿದೆ, ಈ ವೇಳೆ ಕೃಷ್ಣ ಕಿಶೋರ್ ಎಂಬುವರ ಪುತ್ರ ಅಖಿಲೇಶ್ ತಡೆಯಲು ಬಂದಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಿಯಂತ್ರಣ ತಪ್ಪಿ ನೂಕಾಟ- ತಲ್ಲಾಟ ನಡೆದಿದ್ದು ಅಖಿಲೇಶ್ ಹಾಗೂ ರಂಜನ್ ಗೆ ಗಾಯಾಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಜನ್ ರವರು ಅಖಿಲೇಶ್ ರವರನ್ನು ತಳ್ಳಿದ ರಭಸಕ್ಕೆ ಅಖಿಲೇಶ್ ರವರ ಬೆನ್ನಿಗೆ ಪಾರ್ಟಿಷಿಯನ್ ಗ್ಲಾಸ್ ಚುಚ್ಚಿದೆ. ಹಾಗೂ ರಂಜನ್ ರವರ ಕೈ ಹಾಗೂ ಕುತ್ತಿಗೆ ಗೆ ಗಾಯಾಗಳಾಗಿದ್ದು ಇದೀಗಾ ಇಬ್ಬರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ . ಇನ್ನು ಈ ಘಟನೆಗೆ ಸಂಭಂದಿಸಿದಂತೆ ಇತ್ತಂಡಗಳು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಿಎಫ್ ಹಣಕ್ಕಾಗಿ ರಂಜನ್ ಅನೇಕ ಬಾರಿ ಬೈಕ್ ಶೋರೂಮ್ ಗೆ ಬಂದಿದ್ದಾರೆ. ಆದರೆ ಹೆಚ್.ಆರ್ ಗಿರೀಶ್ ಪಿಎಫ್ ಅಪ್ರೂವ್ ಮಾಡದೆ ಸತಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಘಟನೆಗೆ ನಿಖರ ಕಾರಣ ತನಿಖೆಯ ನಂತರ ತಿಳಿದು ಬರಬೇಕಾಗಿದೆ.

- Advertisement -

Latest News

error: Content is protected !!