Thursday, June 4, 2026
Homeಕರಾವಳಿಉಡುಪಿವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ: ಉಡುಪಿಯಲ್ಲೊಂದು ಆತ್ಮಹತ್ಯೆ ಹೈಡ್ರಾಮಾ

ವಿದ್ಯುತ್ ಕಂಬ ಏರಿದ ಮಾನಸಿಕ ಅಸ್ವಸ್ಥ: ಉಡುಪಿಯಲ್ಲೊಂದು ಆತ್ಮಹತ್ಯೆ ಹೈಡ್ರಾಮಾ

- Advertisement -
- Advertisement -

ಉಡುಪಿ: ಮಾನಸಿಕ ಅಸ್ವಸ್ಥನೋರ್ವ ವಿದ್ಯುತ್‌ ಕಂಬ ಏರಿ ಆತ್ಮಹತ್ಯೆ ಯತ್ನಿಸುವ ಮೂಲಕ ಹೈಡ್ರಾಮಾ ಸೃಷ್ಟಿಸಿದ ಘಟನೆ ಉಡುಪಿ ತಾಲೂಕಿನ ಮಲ್ಪೆ ಬಸ್ಸು ನಿಲ್ದಾಣದ ಬಳಿ ನಡೆದಿದೆ.

ಮಲ್ಪೆ ಬಸ್ಸು ನಿಲ್ದಾಣದ ಬಳಿ ಕಟ್ಟಡಕ್ಕೆ ತಾಗಿಕೊಂಡಿರುವ ವಿದ್ಯುತ್ ಕಂಬ ಏರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನಾ ಸ್ಥಳಕ್ಕೆ ಮಲ್ಪೆ ಠಾಣೆ ಪೊಲೀಸರು ಆತನನ್ನು ಕಂಬದಿಂದ ಇಳಿಸಿ ವಿಚಾರಿಸಿದಾಗ ಈತ ಸವದತ್ತಿ ಮೂಲದ ಫಕೀರಪ್ಪ ಎಂದು ಹೇಳಿದ್ದು, ಅಲ್ಲದೇ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!