Thursday, April 25, 2024
Homeಕರಾವಳಿಕಾಸರಗೋಡಿನಲ್ಲಿ ಏರ್ ಗನ್ ಹಿಡಿದು ಮಕ್ಕಳನ್ನು ಮದರಸಾಕ್ಕೆ ಕರೆದೊಯ್ದ ವ್ಯಕ್ತಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು...

ಕಾಸರಗೋಡಿನಲ್ಲಿ ಏರ್ ಗನ್ ಹಿಡಿದು ಮಕ್ಕಳನ್ನು ಮದರಸಾಕ್ಕೆ ಕರೆದೊಯ್ದ ವ್ಯಕ್ತಿ: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

spot_img
- Advertisement -
- Advertisement -

ಕಾಸರಗೋಡು:  ಇಲ್ಲಿನ ಬೇಕಲದ ಹದ್ದದ್ ನಗರದ ನಿವಾಸಿಯೊಬ್ಬರು ವ್ಯಕ್ತಿಯೋರ್ವ ಏರ್ ಗನ್ ಹಿಡಿದು ವಿದ್ಯಾರ್ಥಿಗಳನ್ನು ಮದ್ರಾಸಕ್ಕೆ ಕರೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

 ಕೆಲವು ದಿನಗಳ ಹಿಂದೆ ಕೇರಳದಲ್ಲಿ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ ನಂತರ ಬೀದಿ ನಾಯಿಗಳ ನಿಯಂತ್ರಣದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗಿತ್ತು.‌ಇದರ ಬೆನ್ನಲ್ಲೇ ಆ ಪ್ರದೇಶದ ಮದ್ರಸಾದಲ್ಲಿ ಓದುತ್ತಿರುವ ಮಗುವಿನ ಪೋಷಕರಾದ ಸಮೀರ್ ಈ ರೀತಿ ತಮ್ಮ ಏರ್-ಗನ್ ತೆಗೆದುಕೊಂಡು 13 ಮಕ್ಕಳನ್ನು ಮದರಸಾಕ್ಕೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ಅದರಂತೆ ಮಕ್ಕಳನ್ನು ಯುದ್ಧಕ್ಕೆ ಸಿದ್ಧನಾಗಿ ಹೊರಟ ಯೋಧನಂತೆ ಕೈಯಲ್ಲಿ ಏರ್ ಗನ್ ಹಿಡಿದು ಕರೆದೊಯ್ಯುತ್ತಿರುವ ವಿಡಿಯೋ ವೈರಲ್ ಆಗಿದೆ.

cಇನ್ನು ಬೀದಿನಾಯಿಗಳ ವಿರುದ್ಧ ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮಕೈಗೊಳ್ಳಲಿ ಎಂಬ ಕಾರಣಕ್ಕೆ  ಏರ್ ಗನ್ ಹಿಡಿದು ಮಕ್ಕಳೊಂದಿಗೆ ಹೋಗಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ನಾನೊಬ್ಬ ಅಪ್ಪ. ನನ್ನ ಮಕ್ಕಳಿಗೆ ರಕ್ಷಣೆ ನೀಡುವುದು ನನ್ನ ಜವಾಬ್ದಾರಿ ಎಂದು ಸಮೀರ್ ಹೇಳಿದ್ದಾರೆ. ಈ ಊರಲ್ಲಿ ಕೆಲವು ದಿನಗಳಿಂದ ಬೀದಿ ನಾಯಿ ಕಾಟ ಹೆಚ್ಚಾಗಿದ್ದು, ನನ್ನ ಮಕ್ಕಳು ಮತ್ತು ನೆರೆಯ ಮಕ್ಕಳು ನಾಯಿಯ ಭಯದಿಂದಾಗಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದರು.ಹಾಗಾಗಿ ನಾನು ಬಲವಂತವಾಗಿ ಏರ್ ಗನ್ ಹಿಡಿದು ಅವರ ಜತೆ ಹೋಗಬೇಕಾಗಿ ಬಂತು ಎಂದು ಸಮೀರ್ ಹೇಳಿದ್ದಾರೆ.

ಮೊನ್ನೆ ಬೀದಿ ನಾಯಿಯೊಂದು ಮದರಸಾ ವಿದ್ಯಾರ್ಥಿಗೆ ಕಚ್ಚಿದೆ.ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳು ಮದರಸಾಗೆ ಹೋಗಲು,ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದರು. ಹಾಗಾಗಿ ನಾನು ಅವರಿಗೆ ಭದ್ರತೆ ನೀಡಲು ಬಯಸಿದೆ.ನನ್ನ ಮಗ ಈ ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಅಪ್ಲೋಡ್ ಮಾಡಿದ್ದ ಎಂದಿದ್ದಾರೆ.ನಾನು ಯಾವುದೇ ನಾಯಿಯನ್ನು ಕೊಂದಿಲ್ಲ. ಹಾಗಾಗಿ ನಾನು ಕಾನೂನು ಕ್ರಮಕ್ಕೆ ಹೆದರುವುದಿಲ್ಲ. ಆದರೆ ಯಾವುದೇ ನಾಯಿ ದಾಳಿ ಮಾಡಿದರೆ, ಆತ್ಮರಕ್ಷಣೆಗಾಗಿ ನಾನು ಅದನ್ನು ಶೂಟ್ ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!