Saturday, May 4, 2024
Homeಕರಾವಳಿಉಡುಪಿಉಡುಪಿ;  ಕಾಲೇಜಿಗೆ ತೆರಳಿದ ಸೆಕೆಂಡಿಯರ್ ಡಿಗ್ರಿ ವಿದ್ಯಾರ್ಥಿನಿ ನಾಪತ್ತೆ; ಅತ್ತ ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಪೊಲೀಸರಿಗೆ...

ಉಡುಪಿ;  ಕಾಲೇಜಿಗೆ ತೆರಳಿದ ಸೆಕೆಂಡಿಯರ್ ಡಿಗ್ರಿ ವಿದ್ಯಾರ್ಥಿನಿ ನಾಪತ್ತೆ; ಅತ್ತ ನಾವಿಬ್ಬರು ಮದುವೆಯಾಗಿದ್ದೇವೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ ಯುವಕ

spot_img
- Advertisement -
- Advertisement -

ಉಡುಪಿ;  ಕಾಲೇಜಿಗೆ ತೆರಳುತ್ತೇನೆಂದು ಮನೆಯಿಂದ ಹೇಳಿ ಹೋದ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಕಾಪುವಿನಲ್ಲಿ ನಡೆದಿದೆ.

 ಉಡುಪಿಯ ಕಾಲೇಜೊಂದರಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ಕಟಪಾಡಿ ಮಟ್ಟು ಅಳಿಂಜೆ ನಿವಾಸಿ ನವ್ಯ (20) ಗುರುವಾರ ಕಾಲೇಜಿಗೆ ತೆರಳಿದವಳು ನಾಪತ್ತೆಯಾಗಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನವ್ಯ ಸೆ.15ರಂದು ಎಂದಿನಂತೆ ಕಾಲೇಜಿಗೆ ಹೋದವಳು ಮಧ್ಯಾಹ್ನ 1.30ಕ್ಕೆ ತಾಯಿಗೆ ಕರೆ ಮಾಡಿ ಬಸ್ಸಿನಲ್ಲಿ ಮನೆಗೆ ಬರುತ್ತಿರುವುದಾಗಿ ತಿಳಿಸಿದ್ದು, ಅಪರಾಹ್ನ 2.30 ಆದರೂ ಮನೆಗೆ ತಲುಪಿಲ್ಲ. ಮನೆಯವರು ಮೊಬೈಲ್‌ಗೆ ಕರೆ ಮಾಡಿದರೆ ಮೊಬೈಲ್‌ ಸ್ವಿಚ್‌ಆಫ್‌ ಆಗಿತ್ತು. ನವ್ಯಾ ಪತ್ತೆಯಾಗದ ಕಾರಣ ಆಕೆಯ ಹೆತ್ತವರು ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

 ಇತ್ತ ನವ್ಯ ನಾಪತ್ತೆಯಾಗಿದ್ದರೆ ಅತ್ತ ಪಣಿಯೂರು ನಿವಾಸಿ ದೀಕ್ಷಿತ್‌ ಎಂಬಾತ ತಾನು ಕಟಪಾಡಿ ಮಟ್ಟು ಗ್ರಾಮದ ನವ್ಯ ವಿ. ಎಂಬಾಕೆ ಯೊಂದಿಗೆ ಹಿಂದೂ ಧರ್ಮದ ಪ್ರಕಾರದಲ್ಲಿ ಸೆ. 7ರಂದು ವಿವಾಹ ವಾಗಿದ್ದು, ಸೆ. 15ರಂದು ಉಡುಪಿ ರಿಜಿಸ್ಟರ್‌ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಕೊಂಡಿದ್ದೇವೆ. ಈ ಬಗ್ಗೆ ಯಾರಾದರೂ ದೂರು ನೀಡಿದರೆ ಪೊಲೀಸ್‌ ತನಿಖೆ ನಡೆಸದಂತೆ ಮದುವೆಯ ಫೋಟೋ ಸಹಿತವಾಗಿ ಕಟಪಾಡಿ ಹೊರ ಠಾಣೆಯ ಮೂಲಕ ಕಾಪು ಪೊಲೀಸ್‌ ಠಾಣೆಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!