Monday, May 6, 2024
Homeಕರಾವಳಿಕೋಮಾ ಸ್ಥಿತಿಯಲ್ಲಿದ್ದ ಉತ್ತರಪ್ರದೇಶದ ಕಾರ್ಮಿಕನನ್ನು 41 ಗಂಟೆಗಳಲ್ಲಿ ಮೂಡಬಿದರೆಯಿಂದ ಹುಟ್ಟೂರಿಗೆ ತಲುಪಿಸಿದ ಆಂಬ್ಯುಲೆನ್ಸ್ ಚಾಲಕ

ಕೋಮಾ ಸ್ಥಿತಿಯಲ್ಲಿದ್ದ ಉತ್ತರಪ್ರದೇಶದ ಕಾರ್ಮಿಕನನ್ನು 41 ಗಂಟೆಗಳಲ್ಲಿ ಮೂಡಬಿದರೆಯಿಂದ ಹುಟ್ಟೂರಿಗೆ ತಲುಪಿಸಿದ ಆಂಬ್ಯುಲೆನ್ಸ್ ಚಾಲಕ

spot_img
- Advertisement -
- Advertisement -

ಮೂಡಬಿದಿರೆ: ಇಲ್ಲಿನ ಅಡಿಕೆ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಕಾರ್ಮಿಕರೊಬ್ಬರು ಮಾಡಿನಿಂದ ಬಿದ್ದು ಕೋಮಾದಲ್ಲಿದ್ದರು. ಈ ಕಾರ್ಮಿಕನನ್ನು ಆಂಬ್ಯುಲೆನ್ಸ್ ನಲ್ಲಿ  ಸುಮಾರು 2,700 ಕಿ.ಮೀ. ದೂರದಲ್ಲಿರುವ ಉತ್ತರ ಪ್ರದೇಶದ ಮೊರಾದಾಬಾದ್‌ಗೆ ಕೇವಲ 41 ಗಂಟೆಗಳಲ್ಲಿ ಸುರಕ್ಷಿತವಾಗಿ ಕರೆದೊಯ್ದು  “ಐರಾವತ’ ಆಂಬ್ಯುಲೆನ್ಸ್ ಚಾಲಕ ಮೂಡಬಿದಿರೆಯ ಅನಿಲ್‌ ರೂಬನ್‌ ಮೆಂಡೋನ್ಸಾ ಎಲ್ಲರ ಮೆಚ್ಚುಗೆ ಪಾತ್ರರಾಗಿದ್ದಾರೆ.

ಉತ್ತರ ಪ್ರದೇಶದ ಕಾರ್ಮಿಕ ಮಹಾಂದಿ ಹಸ್ಸನ್‌ ಮೂಡಬಿದಿರೆ ಮಾಸ್ತಿಕಟ್ಟೆಯಲ್ಲಿ ಅಡಿಕೆ ದಾಸ್ತಾನು ಕೇಂದ್ರದಲ್ಲಿ ಕಾರ್ಮಿಕ. ಕೆಲಸದ ಸಂದರ್ಭ ಆಕಸ್ಮಾತ್‌ ಕೆಳಗೆ ಬಿದ್ದು ಆಸ್ಪತ್ರೆ ಸೇರಿ ಕೋಮಾಕ್ಕೆ ಜಾರಿದ್ದ. ಒಡನಾಡಿಗಳ ಸಲಹೆಯ ಮೇರೆಗೆ ಆತನನ್ನು ಸ್ವಂತ ಊರಿಗೆ ಕಳುಹಿಸಲು ಯಜಮಾನರು ವಿಮಾನದ ಟಿಕೆಟ್‌ ತೆಗೆಸಿಕೊಟ್ಟರು. ವೈದ್ಯರಿಲ್ಲದೆ, ದಾದಿಯರಿಲ್ಲದೆ ರೋಗಿಯನ್ನು ಒಯ್ಯಲಾಗದು ಎಂದು ವಿಮಾನ ಯಾನ ಸಂಸ್ಥೆ ನಿರಾಕರಿಸಿದ್ದರಿಂದ “ಐರಾವತ’ ಆಂಬ್ಯುಬುಲೆನ್ಸ್‌ ಮಾಲೀಕ, ಮೂಡಬಿದಿರೆಯ ಅನಿಲ್‌ ರೂಬನ್‌ ಮೆಂಡೋನ್ಸಾ ಅವರಲ್ಲಿ ಕೇಳಿ ಕೊಳ್ಳಲಾಯಿತು.

ಕೊನೆಗೆ ವೈದ್ಯರಿಲ್ಲ. ದಾದಿಯೂ ಇಲ್ಲ. ರೋಗಿಯ ಕಡೆಯವರ ಹೊಣೆಗಾರಿಕೆಯಲ್ಲಿ ಆಸ್ಪತ್ರೆಯವರು ನೀಡಿದ ಬಿಡುಗಡೆ ಪತ್ರ, ಆಮ್ಲಜನಕದ ಜಾಡಿ, ಪೊಲೀಸ್‌ ಠಾಣೆಯಿಂದ ಪಡೆದ ಪತ್ರ ಜತೆಗಿರಿಸಿಕೊಂಡ ಅನಿಲ್‌ ಮೆಂಡೋನ್ಸಾ ಅವರು ಅಶ್ವತ್ಥ್ ಎಂಬ ಇನ್ನೋರ್ವ ಚಾಲಕನನ್ನು ಕರೆದುಕೊಂಡು ಸೆ. 10ರ ಸಂಜೆ ಮೂಡುಬಿದಿರೆಯಿಂದ ಹೊರಟರು.


ಡೀಸೆಲ್‌ ತುಂಬಿಸುವಲ್ಲಿ ಹೊರತು ಪಡಿಸಿ ಎಲ್ಲೂ ವಾಹನ ನಿಲ್ಲಲಿಲ್ಲ. ಹಸ್ಸನ್‌ನ ಗೆಳೆಯರಲ್ಲಿ ಓರ್ವ ವಾಹನ ಚಾಲನೆ ಬಲ್ಲವನಾಗಿದ್ದರಿಂದಲೂ ಅನುಕೂಲವಾಯಿತು. ವಾಹನ ಹೊಸದಿಲ್ಲಿ ತಲುಪುವಾಗ ಇನ್ನೂ 160 ಕಿ.ಮೀ. ದೂರದ ಮೊರಾದಾಬಾದ್‌ಗೆ ಹೋಗಬೇಕಾಗಿದೆ ಎಂದು ಹಸ್ಸನ್‌ ಒಡನಾಡಿಗಳು ತಿಳಿಸಿದರು. ಮೊರಾದಾಬಾದ್‌ನ ಶ್ರೇಯಾ ನ್ಯೂರೋ ಕೇಂದ್ರ ತಲುಪುವಾಗ ಸೆ.12ರ ಬೆಳಗ್ಗೆ 10.30. ಆಂಬ್ಯುಲೆನ್ಸ್‌ ನಲ್ಲಿ ವೈದ್ಯರಾಗಲೀ ದಾದಿಯರಾಗಲೀ ಇಲ್ಲದೆಯೇ ಬಂದಿರುವುದನ್ನು ನೋಡಿದ ಅಲ್ಲಿನ ನರರೋಗ ತಜ್ಞ ಡಾ| ಅಜಯ್‌ ಜೈನ್‌, “ಯೂ ಅರ್‌ ಗ್ರೇಟ್‌’ ಎಂದು ಉದ್ಗರಿಸಿದರಂತೆ.

ಅನಿಲ್‌ ಮೆಂಡೋನ್ಸಾ ಗುರುವಾರ ಮೂಡುಬಿದಿರೆಗೆ ವಾಪಸಾಗಿದ್ದಾರೆ. ಪ್ರಯಾಣದ ಎಲ್ಲ ವೆಚ್ಚವನ್ನೂ ಹಸ್ಸನ್‌ ಯಜಮಾನರು ನೋಡಿಕೊಂಡಿದ್ದಾರೆ. ಅತ್ತ ಹಸ್ಸನ್‌ ಚೇತರಿಸಿಕೊಳ್ಳುತ್ತಿರುವುದಾಗಿ ಮಾಹಿತಿ ಲಭಿಸಿದೆ ಎಂದು ಅನಿಲ್‌ ತಿಳಿಸಿದ್ದಾರೆ. ನಿಜಕ್ಕೂ ಮಾನವೀಯ ಗುಣ ಹಾಗೂ ಅವರ ಧೈರ್ಯಕ್ಕೆ ಹ್ಯಾಟ್ಯಾಫ್ ಹೇಳಲೇ ಬೇಕು.

- Advertisement -
spot_img

Latest News

error: Content is protected !!