Wednesday, June 3, 2026
Homeತಾಜಾ ಸುದ್ದಿಮೋದಿ ಹುಟ್ಟುಹಬ್ಬದಂದೇ ಭಾರತಕ್ಕೆ ಬಂತು 8 ವಿಶೇಷ ಚೀತಾಗಳು

ಮೋದಿ ಹುಟ್ಟುಹಬ್ಬದಂದೇ ಭಾರತಕ್ಕೆ ಬಂತು 8 ವಿಶೇಷ ಚೀತಾಗಳು

- Advertisement -
- Advertisement -

ಮಧ್ಯಪ್ರದೇಶ: ಭಾರತ ಕಾಡುಗಳಿಂದ ಕಣ್ಮರೆಯಾಗಿದ್ದ ಚೀತಾಗಳು ಸುಮಾರು 70 ವರ್ಷಗಳ ಬಳಿಕ ಮತ್ತೆ ಬಂದಿದೆ. ಮೋದಿ ಹುಟ್ಟುಹಬ್ಬದ ದಿನವೇ ಭಾರತಕ್ಕೆ ಚೀತಾಗಳು ಕಾಲಿಟ್ಟಿವೆ.

ನಮೀಬಿಯಾ ದೇಶದಿಂದ ಎಂಟು ಚೀತಾಗಳು ವಿಶೇಷ ವಿಮಾನದಲ್ಲಿ ಭಾರತಕ್ಕೆ ಆಗಮಿಸಿದೆ. ನಮೀಬಿಯಾದಿಂದ ಎಂಟು ಚೀತಾಗಳನ್ನು ಹೊತ್ತ ವಿಶೇಷ ಚಾರ್ಟರ್ಡ್‌ ಕಾರ್ಗೋ ವಿಮಾನವು ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿರುವ ಭಾರತೀಯ ವಾಯುಪಡೆಯ ನಿಲ್ದಾಣಕ್ಕೆ ಇಂದು ಬೆಳಗ್ಗೆ ಬಂದು ಇಳಿದಿದೆ.

 ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಪ್ರಯುಕ್ತ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳನ್ನು ಬಿಡುಗಡೆ ಮಾಡಲಿದ್ದಾರೆ.

- Advertisement -

Latest News

error: Content is protected !!