Friday, June 5, 2026
Homeಕರಾವಳಿಪುತ್ತೂರಿನ ಹೃದಯಭಾಗದಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಕಳ್ಳತನ: 15 ಲಕ್ಷ ರೂಪಾಯಿ ಎಗರಿಸಿದ ಖದೀಮರು

ಪುತ್ತೂರಿನ ಹೃದಯಭಾಗದಲ್ಲಿರುವ ಚಪ್ಪಲಿ ಅಂಗಡಿಯಲ್ಲಿ ಕಳ್ಳತನ: 15 ಲಕ್ಷ ರೂಪಾಯಿ ಎಗರಿಸಿದ ಖದೀಮರು

- Advertisement -
- Advertisement -

ಪುತ್ತೂರು : ನಗರದ ಹೃದಯ ಭಾಗದಲ್ಲಿರುವ ಪ್ರಸಿದ್ಧ ಚಪ್ಪಲಿ ಅಂಗಡಿಯೊಂದರ ಒಳ ನುಗ್ಗಿದ ದುಷ್ಕರ್ಮಿಗಳು ನಗದು ಸಹಿತ ಸಿಸಿ ಕ್ಯಾಮರಾದ ಡಿವಿಆರ್ ಕಳವು ನಡೆಸಿದ ಘಟನೆ ನಡೆದಿದೆ.

ಇಲ್ಲಿನ ದರ್ಬೆ ನಿವಾಸಿ ಸಮೀರ್ ಎಂಬವರಿಗೆ ಸೇರಿದ ನಗರದ ಮುಖ್ಯ ರಸ್ತೆಯಲ್ಲಿರುವ ಪ್ರಕಾಶ್ ಫುಟ್ ವೇರ್ ಎಂಬ ಚಪ್ಪಲಿ ಅಂಗಡಿಯಲ್ಲಿ ಕಳ್ಳತನವಾಗಿದೆ.

ಇನೋವಾ ಕಾರು ಖರೀದಿಸಲೆಂದು ಫುಟ್ ವೇರ್ ಮಾಲಕ ಸಮೀರ್ ಎಂಬವರು ರೂ. 15 ಲಕ್ಷ ರೂಪಾಯಿಗಳನ್ನು ಅಂಗಡಿಯಲ್ಲಿ ಇರಿಸಿದ್ದರು. ರಾತ್ರಿ ಅಂಗಡಿಯ ಮೇಲ್ಛಾವಣಿಯ ಹೆಂಚು ತೆಗೆದು ಅಂಗಡಿ ಒಳಗೆ ನುಗ್ಗಿದ ದುಷ್ಕರ್ಮಿಗಳು ಈ ಹಣವನ್ನು ಲಪಟಾಯಿಸಿದ್ದಾರೆ. ಹಣದ ಜೊತೆಗೆ ಅಂಗಡಿಯಲ್ಲಿದ್ದ ಸಿಸಿ ಕ್ಯಾಮಾರಾದ ಡಿವಿಆರ್ ನ್ನು ದುಷ್ಕರ್ಮಿಗಳು ತಮ್ಮ ಜೊತೆ ಕೊಂಡೊಯ್ದಿದ್ದಾರೆ. ಪುತ್ತೂರು ನಗರ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿ ಶೋಧ ಕಾರ್ಯ ನಡೆಸಿದೆ. ಪುತ್ತೂರು ನಗರ ಪೊಲೀಸರು ಕೇಸ್ ದಾಖಲಿಸಿದ್ದಾರೆ

- Advertisement -

Latest News

error: Content is protected !!