- Advertisement -
- Advertisement -
ಕಾರ್ಕಳ- ಧರ್ಮಸ್ಥಳ- ಸುಬ್ರಹ್ಮಣ್ಯ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಬಳಿ ಮಿನಿ ಲಾರಿ ಮತ್ತು ಬೈಕ್ ಮಧ್ಯೆ ಭೀಕರ ರಸ್ತೆ ಅಪಘಾತವು ಸೋಮವಾರದಂದು ನಡೆದಿದೆ.
ಬೈಕಿನಲ್ಲಿ ಪತಿ, ಪತ್ನಿ ಮತ್ತು ಮೂವರು ಮಕ್ಕಳಿದ್ದು, ಬೈಕಿನಲ್ಲಿದ್ದ ನಾಲ್ಕು ಮಂದಿ ಸಾವನಪ್ಪಿದ್ದಾರೆ ಎಂದು ವರದಿ ಹೇಳಿದೆ. ಮೃತರನ್ನು ಸುರೇಶ್ ಆಚಾರ್ಯ (36 ವ), ಮಕ್ಕಳಾದ ಸುಮೀಕ್ಷಾ (7 ವ) ಸುಶ್ಮಿತಾ (5 ವ), ಸುಶಾಂತ್ (2 ವ) ಎಂದು ಗುರುತಿಸಲಾಗಿದೆ.
ಸುರೇಶ್ ಆಚಾರ್ಯ ಅವರ ಪತ್ನಿ ಮೀನಾಕ್ಷಿ (32 ವ) ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಸ್ತೆ ಅಪಘಾತದಲ್ಲಿ ಮೃತಪಟ್ಟವರು ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಿಮಣೇಲು ಗಾಂಧಿನಗರ ನಿವಾಸಿ ಸೀತರಾಮ ಆಚಾರ್ಯ ರವರ ಕುಟುಂಬಿಕರು ಎಂದು ತಿಳಿದು ಬಂದಿದೆ.
- Advertisement -