- Advertisement -
![]()
- Advertisement -
ಕುಂದಾಪುರ: ವಾರಾಹಿ ನದಿಯಲ್ಲಿ ಮುಳುಗಿ ರೈತರೊಬ್ಬರು ಸಾವನ್ನಪ್ಪಿರುವ ಘಟನೆ ಸಿದ್ದಾಪುರದ ಶಂಕರನಾರಾಯಣ ಗ್ರಾಮದ ತಲ್ಲೂರುಮಕ್ಕಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ, ರೈತ ಬಾಬು ನಾಯ್ಕ ಮೃತಪಟ್ಟವರು. ನಿನ್ನೆ ಸಂಜೆ ವಾರಾಹಿ ಹೊಳೆಯ ಬದಿ ಇರುವ ಕೃಷಿ ಪಂಪ್‌ಸೆಟ್ ಬಂದ್ ಮಾಡಲು ನದಿಯ ಬದಿಗೆ ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಬಾಬು ನಾಯ್ಕ ಅವರ ಮೃತದೇಹವು ನಿನ್ನೆ ಬೆಳಗ್ಗೆ ಮನೆಯ ಸ್ವಲ್ಪ ದೂರದಲ್ಲಿ ಪತ್ತೆಯಾಗಿದೆ.
ಮುಳುಗು ತಜ್ಞ ಈಶ್ವರ್ ಮಲ್ಪೆ ಅವರು ನದಿಯಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ. ಪುತ್ರ ಮಂಜುನಾಥ ನಾಯ್ಕ ಪೊಲೀಸರಿಗೆ ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -


